ಯುವತಿಗೆ ಭೂತ ಹಿಡಿದಿದೆ ಅಂತ ಇವರು ಮಾಡಿದ್ದೇನು ನೋಡಿ….?!

ಬೆಳಗಾವಿ : ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಅಂಗೀಕಾರಗೊಂಡಿದ್ದರೂ ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬೆಳಗಾವಿಯಲ್ಲಿ ಯುವತಿಯೊಬ್ಬಳಿಗೆ ಭೂತ ಹಿಡಿದಿದೆ ಎಂದು ಆಕೆಯ ಸಂಬಂಧಿಕರೇ ಯುವತಿ ಕೈಗೆ ಹಗ್ಗ ಕಟ್ಟಿ ಎಳೆದಾಡಿದ್ದಾರೆ.

ಯುವತಿ ಮನಸೋ ಇಚ್ಛೆ ವರ್ತಿಸುತ್ತಿದ್ದದ್ದನು ನೋಡಿದ ಸಂಬಂಧಿಕರು ಆಕೆಗೆ ದೆವ್ವ ಮೆಟ್ಟಿಕೊಂಡಿದೆ ಎಂದು ಹಗ್ಗದಿಂದ ಆಕೆಯ ಕೈಗಳನ್ನು ಕಟ್ಟಿ ಮಂತ್ರವಾದಿಯ ಬಳಿ ಎಳೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com