ಇನ್ಫೋಸಿಸ್ MD ಹಾಗೂ CEO ಆಗಿ ಸಲೀಲ್‌ ಪರೇಖ್‌ ಆಯ್ಕೆ

ಬೆಂಗಳೂರು : ಇನ್ಫೋಸಿಸ್ನ ನೂತನ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕರಾಗಿ ಸಲೀಲ್‌ ಪರೇಖ್‌ ನೇಮಕಗೊಂಡಿದ್ದು, ಮುಂದಿನ ತಿಂಗಳು 2ನೇ ತಾರೀಕಿನಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಐಟಿ ಕ್ಷೇತ್ರದಲ್ಲಿ ಸಲೀಲ್‌ ಅವರಿಗೆ 30 ವರ್ಷಗಳಷ್ಟು ಅನುಭವವಿದ್ದು, ಫ್ರೆಂಚ್ ಐಟು ಕಂಪನಿ ಕ್ಯಾಪ್‌ ಜೆಮಿನಿಯ ಎಕ್ಸಿಕ್ಯೂಟಿವ್ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಅಲ್ಲದೆ ಇವರ ಟ್ರ್ಯಾಕ್‌ ರೆಕಾರ್ಡ್‌ ಸಹ ಉತ್ತಮವಾಗಿದ್ದು, ವ್ಯವಹಾರವನ್ನು ಕಾರ್ಯಗತಗೊಳಿಸುವಲ್ಲಿ ಚಾಣಾಕ್ಷರಾಗಿರುವುದಾಗಿ ಇನ್ಫೋಸಿಸ್‌ ಅಧ್ಯಕ್ಷ ನಂದನ್‌ ನೀಲೇಕಣಿ ಹೇಳಿದ್ದಾರೆ.

ಸದ್ಯ ಯು.ಬಿ ಪ್ರವೀಣ್ ರಾವ್‌ ಇನ್ಫೋಸಿಸ್‌ನ ಸಿಇಒ ಹಾಗೂ ಎಂ.ಡಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಜನವರಿ 2ಕ್ಕೆ ಅವರ ಅಧಿಕಾರಾವಧಿ ಮುಗಿಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com