ಸಾಧನೆ ಮಾಡುವಲ್ಲಿ ಅಪ್ಪನ ಹಾದಿ ಹಿಡಿದ ಚಾಲೆಂಜಿಂಗ್ ಸ್ಟಾರ್‌ ಪುತ್ರ……

ಬೆಂಗಳೂರು : ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಪುತ್ರ ವಿನೀಶ್‌ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ವಿನೀಶ್‌ ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್‌ ಸ್ಕೂಲ್‌ನಲ್ಲಿ  ವಿದ್ಯಾಭ್ಯಾಸ ಮಾಡುತ್ತಿದ್ದು, ಓದಿನಲ್ಲೂ ಈತ ಮುಂಚೂಣಿಯಲ್ಲಿದ್ದಾನೆ. ವಿನೀಶ್ ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ದರ್ಶನ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಹಾಕಿ ಅಭಿನಂದಿಸಿದ್ದಾರೆ.ತಂದೆಯಂತೆ ಮಗ ಸಹ ಮತ್ತಷ್ಟು ಸಾಧನೆ ಮಾಡುವಂತೆ ಹಾರೈಸಿದ್ದಾರೆ.

ಈಗಾಗಲೆ ವಿನೀಶ್ ಚಿತ್ರರಂಗಕ್ಕೆ ಪರಿಚಯವಾಗಿದ್ದು, ಐರಾವತ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ.

 

Leave a Reply

Your email address will not be published.

Social Media Auto Publish Powered By : XYZScripts.com