Social Media ಗಳಲ್ಲಿ ಹರಿದಾಡ್ತಿದೆ ಅನುಷ್ಕಾ Stunning Photo…!!

ಅನುಷ್ಕಾ ಶೆಟ್ಟಿ ಉತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಅರುಂಧತಿ, ರುದ್ರಮ್ಮ ದೇವಿ, ದೇವಸೇನಾ ದಂತಹ ಚಾಲೆಂಜಿಂಗ್‌ ಪಾತ್ರಗಳನ್ನು ಮಾಡಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ. ಅಲ್ಲದೆ ಸೈಜ್‌ ಝೀರೋ ಸಿನಿಮಾದಲ್ಲಿ ಅವರ ಡೆಡಿಕೇಶನ್‌ ಎಷ್ಟಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ.

ಎಂತಹವರಾದರೂ ಅಂತಹ ಪಾತ್ರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಅನುಷ್ಕಾ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮ  ಪ್ರತಿಭೆಯನ್ನು ತೋರಿಸಿದ್ದಾರೆ. ಈ ಚಿತ್ರಕ್ಕಾಗಿ ಅನುಷ್ಕಾ, 20 ಕೆ.ಜಿ ಹೆಚ್ಚಿಸಿಕೊಂಡು ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದರು.

ಇದಾದ ಕೆಲವೇ ತಿಂಗಳಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ಬಾಹುಬಲಿಯಲ್ಲಿ ದೇವಸೇನಾ ಪಾತ್ರಧಾರಿಯಾಗಿ ಮತ್ತೊಂದು ಚಾಲೆಂಜಿಂಗ್ ಪಾತ್ರ ನಿರ್ವಹಿಸಿದ್ದರು.

ಇದಾದ ಬಳಿಕ ಭಾಗಮತಿ ಸಿನಿಮಾದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ. ಆದರೆ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ಅನುಷ್ಕಾ ಫೋಟೋ ಒಂದನ್ನು ಹರಿಬಿಟ್ಟಿದ್ದು, ಅಭಿಮಾನಿಗಳಲ್ಲಿ ಸಖತ್‌ ಕುತೂಹಲ ಮೂಡಿಸಿದೆ. ಮುಂದೆ ಅನುಷ್ಕಾ ಏನು ಮಾಡಲಿದ್ದಾರೆ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com