ಜನರನ್ನಂತೂ ಬಿಟ್ಟಿಲ್ಲ, ದೇವರನ್ನಾದರೂ ಬಿಡಿ ರಾಹುಲ್‌ ಜೀ… : ಸ್ಮೃತಿ ಇರಾನಿ

ದೆಹಲಿ : ಗುಜರಾತ್‌ನಲ್ಲಿ ಹಿಂದೂಗಳ ಮತ ಸೆಳೆಯಲು ರಾಹುಲ್ ಗಾಂಧಿ ದೇವಾಲಯಗಳಿಗೆ ಹೋಗುತ್ತಿದ್ದಾರೆ ಎಂದು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಮಾಡಿದ್ದಾರೆ.

ಗುಜರಾತ್‌ನ ಮಣಿನಗರದಲ್ಲಿ ಕ್ಷೇತ್ರದ ಅಭ್ಯರ್ಥಿ ಸುರೇಶ್‌ ಪಟೇಲ್‌  ಅವರ ಕಚೇರಿಯನ್ನುದ್ದೇಶಿಸಿ ಮಾತನಾಡಿದ ಸ್ಮೃತಿ, ದೇವಾಲಯಗಳಲ್ಲಿ ತಲೆ ಬಾಗುವ ರಾಹುಲ್ ಗಾಂಧಿ, ದೇವರ ಮುಂದೆ ಭಕ್ತಿ ತೋರುವ ನಾಟಕವಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಹುಸಂಖ್ಯಾತ ಹಿಂದೂಗಳ ಮತ ಸೆಳೆಯಲು ಈ ತಂತ್ರ ಹೂಡಿದ್ದಾರೆ. ನೀವು ಜನಸಾಮಾನ್ಯರನ್ನಂತು ಬಿಟ್ಟಿಲ್ಲ, ದೇವರನ್ನಾದರೂ ಬಿಡಿ. ಸೋಮನಾಥ ದೇವಾಲಯಕ್ಕೆ ರಾಹುಲ್‌ ಹೋಗಿದ್ದರು. ಕೊನೆಗೆ ಸತ್ಯ ಆಚೆ ಬಂತು ನೋಡಿ. ದೇವರ ಪವಾಡ ಎಂತಹದ್ದು ನೋಡಿ ಎಂದು ಟೀಕೆ ಮಾಡಿದ್ದಾರೆ.

ಗುಜರಾತ್‌ನಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಕಾಂಗ್ರೆಸ್‌ಗೂ ಗೊತ್ತು . ಅದಕ್ಕಾಗಿಯೇ ಹಿಂದೂ ಹಿಂದೂ ಎಂದು ಅರಚುತ್ತಿದ್ದಾರೆ. ಗೋಹತ್ಯೆ ಮಾಡುವುದನ್ನು ಕಣ್ಣಾರೆ ಕಂಡು ಏನೂ ಮಾಡದವರು, ತಾನು ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com