WATCH : ಕೊಹ್ಲಿಗೆ ಮಾನುಷಿ ಮನದಾಳದ ಪ್ರಶ್ನೆ : ವಿಶ್ವಸುಂದರಿಗೆ ವಿರಾಟ್ ಹೇಳಿದ್ದೇನು?

ಇತ್ತೀಚೆಗೆ ವಿಶ್ವಸುಂದರಿ ಕಿರೀಟ ಗೆದ್ದ ಭಾರತದ ಮಾನುಷಿ ಚಿಲ್ಲರ್ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೆಹಲಿಯಲ್ಲಿ ನಡೆದ ಒಂದು  ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾನುಷಿ ಚಿಲ್ಲರ್ ವಿರಾಟ್ ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

‘ ನೀವು ವಿಶ್ವದ ಶ್ರೇಷ್ಟ ಬ್ಯಾಟ್ಸಮನ್ ಗಳಲ್ಲಿ ಒಬ್ಬರು. ಹಾಗೂ ಹಲವು ಜನರಿಗೆ ಪ್ರೇರಣೆಯಾಗಿದ್ದೀರಿ. ಸಮಾಜಕ್ಕಾಗಿ ಅನೇಕ ಉತ್ತಮ ಕೆಲಸಗಳನ್ನು ಸಹ ಮಾಡುತ್ತಿದ್ದೀರಿ. ಹಲವು ಜನರು ನಿಮ್ಮಿಂದ ಪ್ರೇರಣೆ ಪಡೆದುಕೊಳ್ಳಲು ಬಯಸುತ್ತಾರೆ. ಮಕ್ಕಳಿಗೆ ಏನು ಹೇಳಲು ಬಯಸುತ್ತೀರಿ. ಅದರಲ್ಲೂ ಕ್ರಿಕೆಟ್ ಕ್ಷೇತ್ರದಲ್ಲಿರುವ ಮಕ್ಕಳಿಗೆ ಏನನ್ನು ಹೇಳುತ್ತೀರಿ..? ಎಂದು ಕೇಳಿದ್ದಾರೆ.

ಮಾನುಷಿ ಪ್ರಶ್ನೆಗೆ ಉತ್ತರಿಸಿದ ವಿರಾಟ್ ‘ ಮೈದಾನದಲ್ಲಿ ನೀವು ಏನನ್ನು ಮಾಡುತ್ತಿದ್ದೀರಾ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಅದು ನಿಜವಾದದ್ದಾಗಿರಬೇಕು ಹಾಗೂ ಅದನ್ನು ಸಂಪೂರ್ಣ ಮನಸ್ಸಿನಿಂದ ಮಾಡಬೇಕು. ನಾಟಕ ಮಾಡಿದರೆ ಜನಕ್ಕೆ ನೀವು ಅರ್ಥವಾಗುವುದಿಲ್ಲ. ನಾನು ಯಾವತ್ತೂ ಬೇರೆಯವರನ್ನು ಅನುಕರಿಸಿಲ್ಲ. ಮೊದಲಿನಿಂದಲೂ ನಾನು ನಾನಾಗಿಯೇ ಇದ್ದೇನೆ. ನನ್ನ ವರ್ತನೆಯ ಬಗ್ಗೆ ಹಲವರಿಗೆ ಆಕ್ಷೇಪವಿತ್ತು ‘

‘ ನಾನು ಬದಲಾಗಬೇಕು ಎನಿಸಿದಾಗ ಮಾತ್ರ ಬದಲಾಗಿದ್ದೇನೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಪ್ರಬುದ್ಧರಾಗಲು ಒಂದು ಪ್ರಕ್ರಿಯೆಯ ಮೂಲಕ ಸಾಗಬೇಕಾಗುತ್ತದೆ. ನಾವು ನಮ್ಮ ಐಡೆಂಟಿಟಿ, ಚಾರಿತ್ರ್ಯ ಹಾಗೂ ವ್ಯಕ್ತಿತ್ವವನ್ನು ಎಂದಿಗೂ ಕಳೆದುಕೊಳ್ಳಬಾರದು. ಬೇರೆಯವರನ್ನು ಅನುಕರಿಸಿದರೆ ಯಾವತ್ತೂ ಜೀವನದಲ್ಲಿ ಯಶಸ್ವಿಯಾಗಲು ಸಾದ್ಯವಿಲ್ಲ. ಮತ್ತು ಇನ್ನೊಬ್ಬರಿಗೆ ಪ್ರೇರಣೆಯಾಗಲೂ ಸಹ ಸಾಧ್ಯವಿಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.