ರಾಹುಲ್‌ಗೆ ಅಧ್ಯಕ್ಷಗಿರಿಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್‌ನ ಶೆಹಜಾದ್‌ ಪಕ್ಷದಿಂದ ಉಚ್ಛಾಟನೆ

ದೆಹಲಿ : ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್‌ನ ಕಾರ್ಯದರ್ಶಿ ಶೆಹಜಾದ್‌ ಪೂನಾವಾಲಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಗುರುವಾರವಷ್ಟೇ ಶೆಹಜಾದ್‌, ರಾಹುಲ್‌ ಗಾಂಧಿ ಅವರಿಗೆ ಎಐಸಿಸಿ ಪಟ್ಟ ನೀಡಲು ನನ್ನ ವಿರೋಧವಿದೆ. ಪಕ್ಷದಲ್ಲಿ ಒಬ್ಬರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡಬೇಕು. ರಾಜಕೀಯ ಎಂದರೆ ಕುಟುಂಬದ ಬ್ಯುಸಿನೆಸ್ ಎಂದು ಕೊಂಡಿದ್ದೀರಾ ?. ಅವಕಾಶವಿದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ಧಿಸುತ್ತೇನೆ ಎಂದಿದ್ದರು.

ಇದರಿಂದಾಗಿ ಕಾಂಗ್ರೆಸ್‌ಗೆ ಭಾರೀ ಮುಜುಗರ ಉಂಟಾಗಿದ್ದು, ಶುಕ್ರವಾರ ಶೆಹಜಾದ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಡಿಸೆಂಬರ್‌ 4ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯವರ ಆಯ್ಕೆ ಖಚಿತವಾದಂತಾಗಿದೆ.

 

Leave a Reply

Your email address will not be published.