ಅನಾಥರಾದ ಅಡ್ವಾಣಿ ! : ಮೈಸೂರಿನಲ್ಲಿ ಬಿಜೆಪಿ ಭೀಷ್ಮನಿಗೆ ಮುಜುಗರ..!!

ಮೈಸೂರು : ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿರುವ ಹಿರಿಯ ನಾಯಕ ಎಲ್‌. ಕೆ ಅಡ್ವಾಣಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಸಂಸದ ಪ್ರತಾಪ್‌ ಸಿಂಹ ಒಬ್ಬರನ್ನು ಬಿಟ್ಟರೆ ಮತ್ಯಾವ ನಾಯಕರು ಕಾಣದ ಪ್ರಸಂಗ ನಡೆದಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ನಾಯಕ ಅಡ್ವಾಣಿ ಆಗಮಿಸಿದ್ದು, ಈ ವೇಳೆ ರಾಜ್ಯದ ಯಾವ ನಾಯಕರು ಇಲ್ಲದ್ದರಿಂದ ಸ್ಥಳೀಯ ನಾಯಕರೇ ಅವರನ್ನು ಸ್ವಾಗತಿಸುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಅಡ್ವಾಣಿಯವರಿಗೆ ಮುಜುಗರವಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com