ಒಬ್ಬನಿಗಾಗಿ ಇಬ್ಬರು ನಟಿಯರ ಕಿತ್ತಾಟ : ಕುಮುದಾಗೆ ಕಾರುಣ್ಯ ಕಾಟ..?

ಬೆಂಗಳೂರು : ಸ್ಯಾಂಡಲ್‌ ವುಡ್‌ ನಟಿ ಕಾರುಣ್ಯ ರಾಂ ವಿರುದ್ದ ಧಾರಾವಾಹಿ ನಟಿ ಅನಿಕಾ ಕಿರುಕುಳ ಆರೋಪ ಹೊರಿಸಿದ್ದು, ದೂರು ನೀಡಲು ಮುಂದಾಗಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದ ಪಾತ್ರಧಾರಿ ಅನಿಕಾ ಅವರ ಮದುವೆ ಮುರಿದು ಬೀಳಲು ಅನಿಕಾ ಕಾರಣ ಎಂದಿದ್ದಾರೆ. 10 ದಿನದ ಹಿಂದೆ ನನಗೆ ಉದ್ಯಮಿ ಸಚಿನ್‌ ಎಂಬುವವರ ಜೊತೆ ನಿಶ್ಚಿತಾರ್ಥವಾಗಿತ್ತು.

ಆದರೆ ನಟಿ ಕಾರುಣ್ಯ ರಾಂ ನಿಂದಾಗಿ ನಮ್ಮಿಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿರುವುದಾಗಿ ಆರೋಪಿಸಿದ್ದಾರೆ. ಸಚಿನ್‌ ಜೊತೆ ನನ್ನ ನಿಶ್ಚಿತಾರ್ಥ ನಡೆದಿತ್ತು. ಆದರೆ ಕಾರುಣ್ಯ ರಾಂ ಸಚಿನ್‌ರನ್ನು ಪ್ರೀತಿಸುತ್ತಿದ್ದು, ನನ್ನ ಹಾಗೂ ಸಚಿನ್‌ ಎಂಗೇಜ್‌ಮೆಂಟ್ ಆದ ಬಳಿಕ ಸಚಿನ್‌ ಹಾಗೂ ಅವರ ತಾಯಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ನನ್ನ ಜೊತೆ ಮತನಾಡದಂತೆ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದ್ದಾರೆ.

ಆದರೆ ಈ ಕುರಿತು ಕಾರುಣ್ಯ ಪ್ರತಿಕ್ರಿಯಿಸಿದ್ದು, ನನಗೆ ಅನಿಕಾ, ಸಚಿನ್‌ ಇಬ್ಬರೂ ಪರಿಚಯವಿಲ್ಲ. ಒಮ್ಮೆ ರೆಸ್ಟೋರೆಂಟ್‌ಗೆ ಹೋಗಿದ್ದಾಗ ಎಲ್ಲರ ಜೊತೆಗಿದ್ದ ಸಚಿನ್‌ರನ್ನು ನಾನು ಮಾತನಾಡಿಸಿದ್ದೆ. ಈಕೆ ಪಬ್ಲಿಸಿಟಿ ಪಡೆಯಲು ಈ ರೀತಿ ಮಾಡುತ್ತಿರಬೇಕು ಎಂದಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com