ಮಂಡ್ಯ ಕ್ಷೇತ್ರದ ಮಾಜಿ ಶಾಸಕ ಜಿ. ನಾಗಪ್ಪ ವಿಧಿವಶ : ಶನಿವಾರ ಅಂತ್ಯಕ್ರಿಯೆ

ಮಂಡ್ಯ ಕ್ಷೇತ್ರದ ಮಾಜಿ ಶಾಸಕ ಗೌಡಗೆರೆ ಜಿ.ನಾಗಪ್ಪ(92) ವಿಧಿವಶರಾಗಿದ್ದಾರೆ. ಮಂಡ್ಯ ತಾಲೂಕಿನ ಗೌಡಗೆರೆ ಗ್ರಾಮದ ನಾಗಪ್ಪ, ಮಂಡ್ಯದ ಮರೀಗೌಡ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಜಿ. ನಾಗಪ್ಪ 1967ರಲ್ಲಿ ಮಂಡ್ಯ ಕ್ಷೇತ್ರದ ಶಾಸಕರಾಗಿದ್ದರು.

ಮೈಸೂರು ವಿಶ್ವಿದ್ಯಾ ನಿಲಯದ ಸೆನೆಟ್, ಸಿಂಡಿಕೇಟ್ ಸದಸ್ಯ, ಮೈಷುಗರ್ ನಿರ್ದೇಶಕ, ಆರ್.ಎ.ಪಿ.ಸಿ.ಎಂ.ಎಸ್ ಕಾರ್ಯದರ್ಶಿ ಆಗಿದ್ದರು. ಮಾಜಿ ಸಿಎಂ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಕೆ.ವಿ.ಶಂಕರೇಗೌಡರ ಒಡನಾಡಿಯಾಗಿದ್ದರು. ನಾಳೆ ಮಧ್ಯಾಹ್ನ ಮಂಡ್ಯದ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com