ಡೋಕ್ಲಾಂ ನಮಗೆ ಸೇರಿದ್ದು : ಮತ್ತೆ ಕ್ಯಾತೆ ತೆಗೆದ ಚೀನಾ

ದೆಹಲಿ : ಡೋಕ್ಲಾಂ ವಿಚಾರವಾಗಿ 2 ತಿಂಗಳ ಕಾಲ ಯುದ್ಧೋತ್ಸಾಹ ಸ್ಥಿತಿಯಲ್ಲಿದ್ದ ಚೀನಾ, ಭಾರತದ ಮೇಲೆ ಮತ್ತೆ ಕತ್ತಿ ಮಸೆಯಲು ಪ್ರಾರಂಭಿಸಿದೆ. ಚಳಿಗಾಲದ ವೇಳೆ ಚೀನಾ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ರಕ್ಷಣಾ ಸಚಿವಾಲಯದ ವಕ್ತಾರ ಖಾವೂ ಖ್ಯಾನ್ ಚೀನಾದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಡೋಕ್ಲಾಂ ಚೀನಾಗೆ ಸೇರಿದ್ದು, ಅದೆಂದಿದ್ದರೂ ಚೀನಾದ ಸ್ವತ್ತು. ಆದ್ದರಿಂದ ಈಗಾಗಲೆ ಸೇನೆಯನ್ನು ನಿಯೋಜಿಸಿದ್ದೇವೆ. ಚಳಿಗಾಲಯ ವೇಳೆ ಮತ್ತಷ್ಟು ಸೇನೆ ನಿಯೋಜನೆ ಮಾಡುವುದಾಗಿ ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಡೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಾಣ ಕಾರ್ಯ ನಡೆಸಿದ್ದು, ಇದಕ್ಕೆ ಭಾರತ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಚೀನಾ ಹಾಗೂ ಭಾರತೀಯ ಯೋಧರು 72ದಿನಗಳ ಕಾಲ ಮುಖಾಮುಖಿಯಾಗಿದ್ದು, ಎರಡೂ ರಾಷ್ಟ್ರಗಳ ಸೈನಿಕರ ಮಧ್ಯೆ ವಾಗ್ವಾದ ಸಹ ನಡೆದಿತ್ತು. 72 ದಿನಗಳ ಬಳಿಕ ಉಭಯ ರಾಷ್ಟ್ರಗಳು ಶಾಂತಿ ಸಂಧಾನ ನಡೆಸಿದ್ದು, ಎರಡೂ ಬದಿ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿದ್ದರು.

ಆದರೆ ಈಗ ಮತ್ತೆ ಸೇನೆ ನಿಯೋಜನೆ ಮಾಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com