ನಾಯಿಗಳ ಜಗಳಕ್ಕೆ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು..? ಆಗಿದ್ದಾದರೂ ಏನು..?

ದಾವಣಗೆರೆ : ನಾಯಿಗಳು ಜಗಳ ಆಡಿದವು ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ವೇಳೆ ಗರ್ಭಿಣಿಯ ಹೊಟ್ಟೆಗೆ ಹಲ್ಲೆ ಮಾಡಿದ ಪರಿಣಾಮ ಮಗು ಸಾವಿಗೀಡಾದ ಘಟನೆ ದಾವಣಗೆರೆಯ ಪಾಮೇನಹಳ್ಳಿಯಲ್ಲಿ ನಡೆದಿದೆ.

ತಿಮ್ಮವ್ವ ಹಾಗೂ ನಂಜುಂಡಪ್ಪ ಎಂಬುವವರ ಮನೆಯ ನಾಯಿಗಳು ಜಗಳವಾಡುತ್ತಿದ್ದವು. ಈ ವೇಳೆ ತಿಮ್ಮವ್ವ ಮನೆ ನಾಯಿಗೆ ನಂಜುಂಡಪ್ಪ ಕಲ್ಲು ಹೊಡೆದಿದ್ದಾರೆ. ತಕ್ಷಣ ತಿಮ್ಮವ್ವ ನಮ್ಮನೆ ನಾಯಿಗೆ ಯಾಕೆ  ಹೊಡೆಯುತ್ತೀಯ ಎಂದು ಜಗಳ ತೆಗೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ನಂಜುಡಪ್ಪ ತಿಮ್ಮವ್ವ ಹಾಗೂ ಗರ್ಭಿಣಿ ಕವಿತಾ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆ ಮಾಡಿದ ಕೂಡಲೆ ಗರ್ಭಿಣಿ ಕವಿತಾ ಚರಂಡಿಗೆ ಬಿದ್ದಿದ್ದು, ಅವರ ಹೊಟ್ಟೆಗೆ ಪೆಟ್ಟು ಬಿದ್ದಿದೆ. ಕೂಡಲೆ ಕವಿತಾರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ದಾವಣಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com