ರಾಹುಲ್ ಕುಟುಂಬಸ್ಥರೆಲ್ಲ ಶಿವಭಕ್ತರು, ಆದರೆ ಅಮಿತ್‌ ಶಾ ಹಿಂದೂವಲ್ಲ : ರಾಜ್‌ ಬಬ್ಬರ್

ದೆಹಲಿ : ರಾಹುಲ್‌ ಗಾಂಧಿ ಹಾಗೂ ಗಾಂಧಿ ಕುಟುಂಬಸ್ಥರು ಹಿಂದುವಲ್ಲ ಎಂಬ ವಿಚಾರ ಸಂಬಂಧ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ, ನಟ ರಾಜ್‌ ಬಬ್ಬರ್‌, ರಾಹುಲ್‌ ಗಾಂಧಿ ಹಾಗೂ ಗಾಂಧಿ ಕುಟುಂಬದವರು ಹಿಂದೂಗಳು ಎಂಬುದರ ಕುರಿತು ಸ್ಪಷ್ಟನೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಸೋಮನಾಥ ದೇವಾಲಯದಕ್ಕೆ ಭೇಟಿ ನೀಡಿದ್ದ ವೇಳೆ ಹಿಂದೂಯೇತರರ ರಿಜಿಸ್ಟರ್‌ನಲ್ಲಿ ಸಹಿ ಮಾಡಿದ್ದರು. ಈ ಸಂಬಂಧ ವಿವಾದ ಹುಟ್ಟಿದ್ದು, ಇದಕ್ಕೆ ರಾಜ್‌ ಬಬ್ಬರ್‌ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮೋದಿ ಹಾಗೂ ಅಮಿತ್‌ ಶಾ ಹಿಂದೂಗಳಲ್ಲ ಎಂದಿದ್ದಾರೆ.

ಅಲ್ಲದೆ ರಾಹುಲ್‌ ಗಾಂಧಿ ಕುಟುಂಬಸ್ಥರು ಶಿವಭಕ್ತರು. ಇಂದಿರಾ ಗಾಂಧಿಯವರು ಆಗ ರುದ್ರಾಕ್ಷಿ ಮಾಲೆ ಧರಿಸುತ್ತಿದ್ದರು. ಶಿವನ ಭಕ್ತರು ಮಾತ್ರ ರುದ್ರಾಕ್ಷಿ ಧರಿಸಲು ಸಾಧ್ಯ ಎಂದಿದ್ದು, ಅಸಲಿಗೆ ಅಮಿತ್ ಶಾ ಹಿಂದೂವಲ್ಲ ಅವರೊಬ್ಬ ಜೈನ ಎಂದು ಬಿಜೆಪಿ ವಿರುದ್ದ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com