Debut ಪಂದ್ಯದಲ್ಲಿ ಶೂನ್ಯಕ್ಕೆ Hit Wicket : ಇತಿಹಾಸ ನಿರ್ಮಿಸಿದ ಸು’ನಿಲ್’ ಅಂಬ್ರಿಸ್..!

ವೆಲ್ಲಿಂಗ್ಟನ್ ನಲ್ಲಿ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಅಂಬ್ರಿಸ್ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯ ಸ್ಮರಣೀಯ ಆಗಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಬ್ಯಾಟ್ಸಮನ್ ಕನಸಾಗಿರುತ್ತದೆ.

24 ವರ್ಷದ ಸುನಿಲ್ ಅಂಬ್ರಿಸ್, ಪಾದಾರ್ಪಣೆ ಪಂದ್ಯದಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಗೋಲ್ಡನ್ ಡಕೌಟ್ ಆಗಿದ್ದಾರೆ. ನೀಲ್ ವ್ಯಾಗ್ನರ್ ಎಸೆತವನ್ನು ಎದುರಿಸುವಾಗ ಬಲಗೈ ಬ್ಯಾಟ್ಸಮನ್ ಸುನಿಲ್ ಅಂಬ್ರಿಸ್ ಹಿಂದಕ್ಕೆ ಕಾಲಿಟ್ಟಿದ್ದಾರೆ. ಅದು ಸ್ಟಂಪ್ ಗೆ ತಾಗಿ ಹಿಟ್ ವಿಕೆಟ್ ಔಟ್ ಆಗಿದ್ದಾರೆ.

ಈ ಮೂಲಕ ಸುನಿಲ್ ಅಂಬ್ರಿಸ್ ಪಾದಾರ್ಪಣೆಯ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿಯೇ, ಶೂನ್ಯಕ್ಕೆ ಹಿಟ್ ವಿಕೆಟ್ ಔಟ್ ಆದ ವಿಶ್ವದ ಮೊದಲ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com