ಓಖಿ Effect : ತಮಿಳುನಾಡಿನಲ್ಲಿ ಭಾರೀ ಮಳೆಗೆ ಎಂಟು ಮಂದಿ ಸಾವು

ಚೆನ್ನೈ : ಬಂಗಾಳಕೊಲ್ಲಿಯಲ್ಲ್ಲಿವಾಯುಭಾರ ಕುಸಿತ ಉಂಟಾದ ಪರಿಣಾಮ ಓಖಿ ಚಂಡಮಾರುತದ ರಭಸ ಹೆಚ್ಚಿದ್ದು, ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇದುವರೆಗೂ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ಓಖಿ ಚಂಡಮಾರುತ ಲಕ್ಷದ್ವೀಪದತ್ತ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಚಂಡಮಾರುತದ ರಭಸಕ್ಕೆ ಇದುವರೆಗೂ ಎಂಟು ಮಂದಿ ಸಾವಿಗೀಡಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಅನೇಕ ಪ್ರದೇಶಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ತೂತುಕುಡಿ, ತಿರುನಲ್ವೇಲಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತಪ ನಿರ್ವಹಣೆಯ 2 ತಂಡಗಳು ತಮಿಳುನಾಡಿಗೆ ಆಗಮಿಸಿದ್ದಾರೆ. ಕೇರಳದಲ್ಲಿ  ಒಂದು ಎನ್‌ಡಿಆರ್‌ಎಫ್‌ ತಂಡ ಸನ್ನದ್ಧ ಸ್ಥಿತಿಯಲ್ಲಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.