NO ಕನ್ಫ್ಯೂಷನ್, NO ಥ್ರಿಲ್ಲರ್‌, ನಮ್ಮದು ಟ್ರೂತ್‌ಫುಲ್‌ ಸಿನಿಮಾ : ಉಪೇಂದ್ರ

ಮೈಸೂರು : ಕೆಪಿಜೆಪಿ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಮ್ಮ ಪಕ್ಷದ ಕುರಿತು ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಉಪೇಂದ್ರ, ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ, ಥ್ರಿಲ್ಲರ್‌ ಸಿನಿಮಾನೂ ಅಲ್ಲ. ನಮ್ಮದು ಟ್ರೂತ್‌ ಫುಲ್‌ ಸಿನಿಮಾ ಎಂದಿದ್ದಾರೆ. ಅರ್ಥವಾಗದಿರುವವರಿಗೆ ಇದೊಂಥರ ಹಾರರ್‌ ಸಿನಿಮಾ. ನಿಮ್ಮ ಬಳಿ ಮತ ನೀಡಿ ಎಂದು ಭಿಕ್ಷೆ ಬೇಡುತ್ತಿಲ್ಲ. ನಾನು ದೇಶಸೇವೆಗಾಗಿ ಮುಂದೆ ಬಂದಿದ್ದೇನೆ. ನೀವು ಗೆಲ್ಲಿಸಬೇಕೇ ಹೊರತು ನಾನು ಗೆಲ್ಲುತ್ತೇನೆ ಎನ್ನುವುದಿಲ್ಲ ಎಂದಿದ್ದಾರೆ.

ನನ್ನ ಪಕ್ಷಕ್ಕ ಗಣ್ಯರು, ಹಿರಿಯರು , ಮೈಸೂರು ಮಹಾರಾಜರು ಬೆಂಬಲ ನೀಡಿದ್ದಾರೆ. ಇದುವರೆಗೂ ಯಾವ ನಟರೂ ನನ್ನ ಪಾರ್ಟಿಗೆ ಬರುತ್ತೇನೆ ಎಂದಿಲ್ಲ. ಆದರೆ ಶಿವರಾಜ್‌ ಕುಮಾರ್‌, ಯಶ್‌ ಸೇರಿದಂತೆ ಹಲವರು ಬೆಂಬಲಿಸಿದ್ದಾರೆ. ರಾಜಕೀಯ ಎಂದರೆ ಹೀಗೆ ಎಂದು ನಾವು ನಂಬಿದ್ದೇವೆ. ಅದನ್ನು ಬದಲಾಯಿಸಬೇಕು. ಅದಕ್ಕಾಗಿ ಕೆಪಿಜೆಪಿ ಎಂಬ ಕ್ಯಾಶ್‌ಲೆಸ್‌ ಪಕ್ಷವನ್ನು ಹುಟ್ಟುಹಾಕಿದ್ದೇವೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕು. ಅದಕ್ಕಾಗಿಯೇ ಆ್ಯಪ್‌ ಬಿಡುಗಡೆ ಮಾಡಿದ್ದೇವೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸ ಮಾಡುವವರು ನಮ್ಮ ಪಕ್ಷಕ್ಕೆ ಬನ್ನಿ. ಇಲ್ಲವಾದರೆ ಬರಲೇಬೇಡಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com