ಇನ್ಮುಂದೆ ಪ್ರತೀ ತಿಂಗಳ 2ನೇ ಭಾನುವಾರ ಖಾಸಗಿ ವಾಹನ ಬಳಸುವಂತಿಲ್ಲ…..???!!!

ಬೆಂಗಳೂರು : ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರತೀ ತಿಂಗಳ 2ನೇ ಭಾನುವಾರ ಜನರು ತಮ್ಮ ಖಾಸಗಿ ವಾಹನ ಬಳಸದಂತೆ ಸೂಚನೆ ನೀಡಲಾಗಿದೆ.

ಇದಕ್ಕಾಗಿಯೇ ಟ್ರಾಫಿಕ್‌ ಲೆಸ್‌ ಡೇಯನ್ನು ಪ್ರತೀ ತಿಂಗಳ 2ನೇ ಭಾನುವಾರ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಸರ್ಕಾರಿ ವಾಹನಗಳು ಅಥವಾ ಖಾಸಗಿ ವಾಹನಗಳು ರಸ್ತೆಗಿಳಿಸದಂತೆ ಸೂಚಿಸಿದ್ದು, ಸಾರಿಗೆ ಸಂಸ್ಥೆಯ ಬಸ್ಸು ಅಥವಾ, ಆಟೋಗಳಲ್ಲಿ ಸಂಚರಿಸಲು ಸೂಚಿಸಿದೆ.

ಈ ಕುರಿತು ಸಾರಿಗೆ ಸಚಿವ ಎಚ್.ಎಂ ರೇವಣ್ಣ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ್ದು, ಪ್ರತೀ ತಿಂಗಳ ಎರಡನೇ ಭಾನುವಾರ ಖಾಸಗಿ ವಾಹನಗಳನ್ನು ಬಳಸದೆ, ಸಾರಿಗೆ ಸಂಸ್ಥೆಯ ವಾಹನಗಳು, ಬಾಡಿಗೆ ವಾಹನ ಅಥವಾ ಆಟೋ ಬಳಸುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪರಿಸರ ಮಾಲಿನ್ಯ ಎಷ್ಟಿದೆ ಎಂಬುದನ್ನು ನೋಡುತ್ತಿದ್ದೇವೆ. ಆ ಸ್ಥಿತಿ ಬೆಂಗಳೂರಿಗೆ ಬರಬಾರದು. ಫೆಬ್ರವರಿ ಎರಡನೇ ಭಾನುವಾರದಿಂದಲೇ ಈ ನಿಯಮ ಜಾರಿಯಾಗುತ್ತದೆ ಎಂದಿದ್ದಾರೆ.

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ನಾವೂ ಸಾಧ್ಯವಾದಷ್ಟು ಕೆಲಸ ಮಾಡಬೇಕಿದೆ. ಅದಕ್ಕಾಗಿ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.