ಕ್ರಿಕೆಟ್ ಗೆ ಸಯೀದ್ ಅಜ್ಮಲ್ ವಿದಾಯ : ICC ಮೇಲೆ ಕಿಡಿಕಾರಿ ಕಟುಸತ್ಯ ಬಿಚ್ಚಿಟ್ಟ ಸ್ಪಿನ್ನರ್..!

ಪಾಕಿಸ್ತಾನದ ಖ್ಯಾತ ಆಫ್ ಸ್ಪಿನ್ ಬೌಲರ್ ಸಯೀದ್ ಅಜ್ಮಲ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿರುವ ಅಜ್ಮಲ್ ‘ ನನ್ನ 40 ನೇ ವಯಸ್ಸಿನಲ್ಲಿ ನಾನು ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ಮುಂಬರುವ ಯುವ ಆಟಗಾರರಿಗೆ ಅವಕಾಶ ಮಾಡಿಕೊಂಡುವುದು ನನ್ನ ಕರ್ತವ್ಯ. ನಾನು ನನ್ನ ತಂಡಕ್ಕೆ ಅನಗತ್ಯ ಭಾರವಾಗುತ್ತಿದ್ದೇನೆ ಎನಿಸತೊಡಗಿತ್ತು. ಗೌರವವನ್ನು ಕಳೆದುಕೊಂಡು ಹೋಗುವುದು ನನಗೆ ಇಷ್ಟವಿರಲಿಲ್ಲ ‘ ಎಂದಿದ್ದಾರೆ.

Image result for saeed ajmal

‘ ನಾನು ತುಂಬ ಭಾರವಾದ ಹೃದಯದಿಂದ ವಿದಾಯ ಹೇಳುತ್ತಿದ್ದೇನೆ. ಬೌಲರ್ಗಳ ಪಾಲಿಗೆ ಐಸಿಸಿ ವಿಧಿಸಿರುವ ಶಿಷ್ಠಾಚಾರ ತುಂಬ ಕಠಿಣವಾಗಿದೆ. ಇಂದಿನ ಎಲ್ಲ ಅಂತರಾಷ್ಟ್ರೀಯ ಬೌಲರ್ಗಳು ಐಸಿಸಿ ಪರೀಕ್ಷೆ ಎದುರಿಸಿದರೆ ಖಂಡಿತ 90 % ಜನ ಫೇಲ್ ಆಗುತ್ತಾರೆ. ಎಲ್ಲ ಸಮಯದಲ್ಲಿಯೂ ಐಸಿಸಿ ನಿಯಮಾವಳಿಯ ಪ್ರಕಾರವೇ ಬೌಲ್ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಮೊಣಕೈ ಬಾಗುವಿಕೆಯ ನಿಯಮದಲ್ಲಿ ಬೌಲರ್ಗಳಿಗೆ ಕೊಂಚ ರಿಯಾಯಿತಿ ನೀಡಬೇಕು’ ಎಂದಿದ್ದಾರೆ.

Image result for saeed ajmal retire icc

‘ ಐಸಿಸಿ ನನ್ನ ಮೇಲೆ ನಿಷೇಧ ಹೇರಿದಾಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನನ್ನನ್ನು ಬೆಂಬಲಿಸಿತ್ತು. ಆದರೆ ನನ್ನ ಪ್ರಕರಣವನ್ನು ಬಳಸಿಕೊಂಡು ಐಸಿಸಿಯ ಕಠಿಣ ಶಿಷ್ಟಾಚಾರದ ನಿಯಮಗಳನ್ನು ಪ್ರಶ್ನಿಸುವ ಕೆಲಸವನ್ನು ಪಾಕ್ ಬೋರ್ಡ್ ಮಾಡಬೇಕಿತ್ತು. ಪಾಕಿಸ್ತಾನದ ಪರವಾಗಿ ಒಂದು ಕೊನೆಯ ಪಂದ್ಯವನ್ನಾಡಿ ವಿದಾಯ ಹೇಳಲು ಬಯಸಿದ್ದೆ ‘ ಎಂದಿದ್ದಾರೆ.

 

Leave a Reply

Your email address will not be published.