ಅರ್ಧ ಘಂಟೆ ಚಾರ್ಜ್ ಮಾಡಿದ್ರೆ ಎರಡು ದಿನ ಬ್ಯಾಟರಿ ಬಾಳಿಕೆ..?? ಯಾವುದು ಈ ಫೋನ್..??


ಸ್ಮಾರ್ಟ್‌ಫೋನ್ ಮಾರುಕಟ್ಟೆ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ಸ್ಯಾಮ್‌ಸಂಗ್ ಮತ್ತೊಂದು ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಹೊಸ ಮಾದರಿಯ ಡಿಸ್‌ಪ್ಲೇಯನ್ನು ಅನ್ವೇಷಿಸಿ, ಯಶಸ್ಸು ಕಂಡಿರುವ ಸ್ಯಾಮ್‌ಸಂಗ್ ಸದ್ಯ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲು ಹೊಸದೊಂದು ತಂತ್ರವನ್ನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಸಲು ಮುಂದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ವೈರ್ ಲೈಸ್ ಚಾರ್ಜಿಂಗ್ ಮತ್ತು ಫಾಸ್ಟ್‌ ಚಾರ್ಜಿಂಗ್ ಕಾಣಿಸಿಕೊಂಡಿದ್ದು, ಇದಕ್ಕೆ ಭಿನ್ನವಾಗಿ ವೇಗ ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ಬರುವ ಮಾದರಿಯಲ್ಲಿ ಹೊಸ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಅಭಿಪಡಿಸಲು ಮುಂದಾಗಿದೆ , ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಸ್ಯಾಮ್ ಸಂಗ್ ಅಭಿವೃದ್ಧಿಪಡಿಸುತ್ತಿರುವ ಈ ಹೊಸ ತಂತ್ರಜ್ಞಾನದಲ್ಲಿ ಅರ್ಧಗಂಟೆಯಲ್ಲಿ ಶೇ.50% ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ. ಅಲ್ಲದೇ ಇದು ಎರಡು ದಿನಗಳ ಬಾಳಿಕೆಯನ್ನು ಸಹ ನೀಡಲಿದೆ. ಈ ಹೊಸ ತಂತ್ರಜ್ಞಾನವು ಶೀಘ್ರವೇ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.

ಭವಿಷ್ಯದ ತಂತ್ರಜ್ಞಾನ
ಸ್ಯಾಮ್‌ಸಂಗ್ ಹೊಸ ಮಾದರಿಯ ವಸ್ತುವನ್ನು ಹಾಗೂ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಭವಿಷ್ಯದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಇದು ಮುಂಬರುವ ಸ್ಮಾರ್ಟ್‌ಫೋನ್ ಗಳಲ್ಲಿ ಈ ತಂತ್ರಜ್ಞಾನವು ಹೆಚ್ಚಾಗಿ ಬಳಕೆಯಲ್ಲಿರಲಿದೆ .

ಬ್ಯಾಟರಿ ಸ್ಪೋಟಕ್ಕೆ license
ಈಗಾಗಲೇ ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಟೋಟಗೊಂಡು ಸ್ಯಾಮ್‌ಸಂಗ್ ಕಂಪನಿಗೆ ಹೆಚ್ಚಿನ ನಷ್ಟವನ್ನು ಅನುಭವಿಸಿತ್ತು. ಇದಕ್ಕೆ ಪರಿಹಾರ ನೀಡುವ ಸಲುವಾಗಿ ಸ್ಯಾಮ್‌ಸಂಗ್ ಹೊಸ ಮಾದರಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿತ್ತು,.

Leave a Reply

Your email address will not be published.