ಕೋಟಿಗೊಬ್ಬ -3 ಸಿನಿಮಾಕ್ಕೆ ಕಿಚ್ಚ ಸುದೀಪ್‌ ಪಡೆಯುತ್ತಿರೋ ಸಂಭಾವನೆ ಎಷ್ಟು….?

ಕೋಟಿಗೊಬ್ಬ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಹಸ ಸಿಂಹ ಅಭಿನಯಿಸಿದ ಸಿನಿಮಾ ಇಂದಿಗೂ ಅಭಿಮಾನಿಗಳ ಮನದಲ್ಲೇ ಅಚ್ಚಳಿಯದೆ ಉಳಿದಿದೆ.

ಇನ್ನು ಇದೇ ಹೆಸರಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಕೋಟಿಗೊಬ್ಬ 2 ಸಿನಿಮಾ ಮಾಡಿದ್ದರು. ಈ ಸಿನಿಮಾ ಸಹ ಭರ್ಜರಿಯಾಗಿ ಮೂಡಿಬಂದಿತ್ತು. ಅಲ್ಲದೆ ಈ ಸಿನಿಮಾ ತಮಿಳಿನಲ್ಲೂ ರಿಲೀಸ್ ಆಗಿತ್ತು.

ಇದೀಗ ಕೋಟಿಗೊಬ್ಬ – ಚಿತ್ರ ಮಾಡಲು ನಿರ್ಧರಿಸಿದ್ದು, ಸಿನಿಮಾದ ಕೆಲಸ ಈಗಾಗಲೆ ಶುರುವಾಗಿದೆ. ಸದ್ಯ ಕೋಟಿಗೊಬ್ಬ 3 ಚಿತ್ರದ ಸ್ಕ್ರಿಪ್ಟ್‌ ಮಾಡುವ ಕೆಲಸ ನಡೆಯುತ್ತಿದ್ದು, ಚಿತ್ರದಲ್ಲಿ ಅಭಿನಯಿಸಲು ಕಿಚ್ಚ ಸುದೀಪ್‌ ಬರೋಬ್ಬರಿ ಎಂಟು ಕೋಟಿ ಸಂಭಾವನೆ ಪಡೆದಿದ್ದಾರೆ. ಹೀಗಂತ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿರುವ ಕೋಟಿಗೊಬ್ಬ 3 ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com