ಹೆಂಡತಿ ಅಡುಗೆಗೆ ಎಣ್ಣೆ ಜಾಸ್ತಿ ಹಾಕಿದಳು ಎಂದು ಪತಿರಾಯ ಮಾಡಿದ್ದೇನು……ನೋಡಿ….?

ಕಲಬುರ್ಗಿ : ಪತ್ನಿ ಅಡುಗೆಯಲ್ಲಿ ಹೆಚ್ಚಿಗೆ ಎಣ್ಣಿ ಹಾಕಿದಳು ಎನ್ನುವ ಕಾರಣಕ್ಕಾಗಿ ಕುದಿಯುವ ಅಡುಗೆ ಎಣ್ಣೆಯನ್ನು ಪತ್ನಿಯ ಮುಖಕ್ಕೆ ಎರಚಿದ್ದಲ್ಲದೇ, ಮೈ ಮೇಲೆ ಸೀಮೆ ಎಣ್ಣೆ ಸುರಿದು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ. ಗಂಡನಿಂದ ಹಲ್ಲೆಗೊಳಗಾದ ಯವತಿ ಪ್ರಿಯಾಂಕಾ  (22) ಎಂದು ತಿಳಿದುಬಂದಿದೆ. ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪ್ರಿಯಾಂಕಾಳಿಗೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ನೆಲೋಗಿ ಗ್ರಾಮದ ಭೀಮಾಶಂಕರ್ ಎಂಬಾತ ಹೆಂಡತಿ ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದಳು ಅನ್ನೋ ಕಾರಣಕ್ಕೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಚಿತ್ತಾಪುರ ತಾಲೂಕಿನ ಜೀವಣಗಿ ಗ್ರಾಮದ ಪ್ರಿಯಾಂಕಾ ಮತ್ತು ಭೀಮಾಶಂಕರ್‌ ವಿವಾಹ ನಾಲ್ಕು ವರ್ಷಗಳ ಹಿಂದೆ‌‌ ವಿವಾಹವಾಗಿತ್ತು. ಈ ದಂಪತಿಗೆ ಹದಿನೆಂಟು ತಿಂಗಳ ಹೆಣ್ಣು ಮಗುವಿದೆ. ಇನ್ನು ಮದುವೆಯಾದ ನಂತರ ಭೀಮಾಶಂಕರ್ ಮತ್ತು ಆತನ ತಾಯಿ, ಸಹೋದರಿ ಪ್ರಿಯಾಂಕಾಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಅಡುಗೆ ಮಾಡುವ‌ ವಿಷಯದಲ್ಲಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಲೆ ಇತ್ತಂತೆ. ಆದರೆ ಕಳೆದ ಭಾನುವಾರ ಭೀಮಾಶಂಕರ್, ಇಂತಹದೊಂದು ದುಷ್ಕೃತ್ಯ ಎಸಗಿದ್ದಾನೆ. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಪೊಲೀಸರು ಆರೋಪಿ ಭೀಮಾಶಂಕರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com