88 ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚಿಸಿದ ಶಾಲಾ ಶಿಕ್ಷಕರು…. !!

ಇಟಾನಗರ ; ಅರುಣಾಚಲ ಪ್ರದೇಶದ ಬಾಲಕಿಯರ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಟ್ಟುವಂತಹ ಶಿಕ್ಷೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ನವೆಂಬರ್ 23ರಂದು ಪಾಪುಮ್ಪರೆ  ಜಿಲ್ಲೆಯ ಕಸ್ತೂರ ಬಾ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯ ಸುಮಾರು 88 ಮಂದಿ ವಿದ್ಯಾರ್ಥಿನಿಯರಿಗೆ ಈ ರೀತಿ ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಕೆಟ್ಟ ಶಬ್ದಗಳಿಂದ ಬರೆದಿದ್ದ ಪೇಪರ್‌ ಒಂದು ಸಿಕ್ಕ ಬಳಿಕ ಮೂವರು ಶಿಕ್ಷಕರು 88 ವಿದ್ಯಾರ್ಥಿಗಳಿಗೆ ಇತರೆ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಟ್ಟುವಂತೆ ಶಿಕ್ಷೆ ನೀಡಿದ್ದಾರೆ.

ಪ್ರಕರಣ ಸಂಬಂಧ ನವೆಂಬರ್ 27ರಂದು ವಿದ್ಯಾರ್ಥಿನಿಯರು ಅಲ್‌ ಸಗಾಲಿ ಸ್ಟೂಡೆಂಟ್‌ ಯೂನಿಯನ್‌ ಮೊರೆ ಹೋಗಿದ್ದು, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅರುಣಾಚಲ ಪ್ರದೇಸ ಕಾಂಗ್ರೆಸ್‌ ಸಮಿತಿ ಈ ಘಟನೆಯನ್ನು ಖಂಡಿಸಿದ್ದು, ಶಿಕ್ಷಕರ ಈ ರೀತಿಯ ಕೃತ್ಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ. ಜೊತೆಗೆ ಮಕ್ಕಳ ಘನತೆಗೆ ಧಕ್ಕೆ ತರುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ದ ಎಂದಿದೆ.

 

 

 

Leave a Reply

Your email address will not be published.