ನಮಾಜ್‌ (ಆಜಾನ್‌) ಧ್ವನಿ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್‌ : ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಗುರುವಾರ ಭಾಷಣ ಮಾಡುವ ವೇಳೆ  ಅರ್ಧಕ್ಕೇ ನಿಲ್ಲಿಸಿದ ವಿಶೇಷ ಘಟನೆಯೊಂದು ನಡೆದಿದೆ.

ಮೋದಿ ಭಾಷಣ ಮಾಡುವಾಗ ಇದ್ದಕ್ಕಿದ್ದಂತೆ ಭಾಷಣ ನಿಲ್ಲಿಸಿದ್ದಾರೆ. ಕಾರಣ ಆಜಾನ್‌. ಹೌದು ಮೋದಿ ಭಾಷಣ ಮಾಡುವಾಗ ಎಲ್ಲೋ ನಮಾಜ್‌ (ಆಜಾನ್‌) ಮಾಡುವ ಧ್ವನಿ ಕೇಳಿಸಿದೆ. ತಕ್ಷಣ ಮೋದಿ ತಮ್ಮ ಮಾತನ್ನು ನಿಲ್ಲಿಸಿದ್ದು, ಆಜಾನ್‌ ಪೂರ್ಣವಾಗುವವರಹೆಗೂ ಮೌನವಾಗಿ ನಿಂತಿಕೊಂಡಿದ್ದರು. ಆಜಾನ್‌ ಪೂರ್ಣಗೊಂಂಡ ಬಳಿಕ ಮತ್ತೆ ಭಾಷಣ ಶುರುಮಾಡಿದರು.

ಪ್ರಧಾನಿಯವರ ಈ ನಡೆ ಸಭಿಕರನ್ನು ಕೆಲಕಾಲ ಚಕಿತಗೊಳ್ಳುವಂತೆ ಮಾಡಿದ್ದು, ಬಳಿಕ ನಮಾಜ್‌ಗಾಗಿ ಮೋದಿ ತಮ್ಮ ಭಾಷಣವನ್ನು ನಿಲ್ಲಿಸಿದ ವಿಷಯ ತಿಳಿದು ಅನೇಕರು ಪ್ರಶಂಸೆ ವ್ಯಕ್ತಪಡಿಸಿದರು. ನಮಾಜ್‌ ಧ್ವನಿ ಕೇಳಿದ ಕೂಡಲೆ ಭಾಷಣ ನಿಲ್ಲಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಮಾಜ್‌ ಧ್ವನಿ ಕೇಳಿದಾಗಲೂ ಮಾತನಾಡುವುದನ್ನು ನಿಲ್ಲಿಸಿದ್ದರು. ಆಗ, ಯಾರದ್ದೇ ಪ್ರಾರ್ಥನೆಯಾಗಲಿ ನಡುವೆ ಅಡ್ಡಿ ಮಾಡುವುದು ನನಗಿಷ್ಟವಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published.

Social Media Auto Publish Powered By : XYZScripts.com