ಧೋನಿಯ ಟೆಸ್ಟ್ ಕ್ರಿಕೆಟ್ ವಿದಾಯದ ಸುದ್ದಿ ಮುಂದೆ ಮರೆಯಾಗಿತ್ತೇ ಅಮಿತ್ ಶಾ ಕೇಸ್…?

ದೆಹಲಿ : ಸೋಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬ್ರಿದ್ ಗೋಪಾಲ್ ಹರಿಕಿಶನ್ ಲೋಯಾ ಸಾವಿನ ಕುರಿತ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2014ರ ನವೆಂಬರ್ 30ರಂದು ಮೃತಪಟ್ಟಿದ್ದ ಲೋಯಾರ ಸಾವಿರ ಹೃದಯಾಘಾತವೇ ಕಾರಣವೆಂದು ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಆದರೆ ಅವರ ಸಾವಿನ ಕುರಿತು ಕುಟುಂಬ ಮೌನ ಮುರಿದಿದ್ದು, ಯೋಲಾ ಅವರ ಸಾವಿನ ಕುರಿತು ನಮಗೆ ಅನುಮಾನಗಳಿವೆ ಎಂದು ಕಾರವಾನ್ ಮ್ಯಾಗಜಿನ್ಗೆ ಹೇಳಿಕೆ ನೀಡಿದ್ದರು.

ವೈದ್ಯೆಯಾಗಿರುವ ಲೋಯಾ ಅವರ ಸಹೋದರಿ ಅನುರಾಧಾ ಬಿಯಾನಿ, ಬಾಂಬೆ ಹೈಕೋರ್ಟ್ನ ಮಖ್ಯ ನ್ಯಾಯಾಧೀಶರಾಗಿದ್ದ ಮೋಹಿತ್ ಶಾ ನನ್ನ ಸಹೋದರನಿಗೆ 100 ಕೋಟಿಯ ಆಮಿಷ ಒಡ್ಡಿದ್ದರು. ಇದಕ್ಕೆ ಪ್ರತಿಯಾಗಿ ಲೋಯಾ ವಿಚಾರಣೆ ನಡೆಸುತ್ತಿದ್ದ ಎನ್ಕೌಂಟರ್ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡಬೇಕೆಂಬುದು ಅವರ ಉದ್ದೇಶವಾಗಿತ್ತು. ದೀಪಾವಳಿ ಆಟರಣೆಗಾಗಿ ನಮ್ಮ ಕುಟುಂಬ ಸದಸ್ಯರೆಲ್ಲರೂ ಗೇಟ್ಗಾಂವ್ನಲ್ಲಿನ ನಮ್ಮ ಪೂರ್ವಜನರ ಮನೆಗೆ ತೆರಳಿದ್ದಾಗ ಲೋಯಾ ಈ ಬಗ್ಗೆ ನನಗೆ ಹೇಳಿದ್ದರು. ಇದು ಆತನ ಸಾವಿನ ಒಂದು ವಾರದ ಮುಂಚೆ ನಡೆದ ಘಟನೆ ಎಂದು ಅನುರಾಧಾ ರವಾನ್ ಮ್ಯಾಗಜೀನ್ಗೆ ಹೇಳಿದ್ದಾರೆ.
ಲೋಯಾ, 2014ರಲ್ಲಿ ಸೋಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಉತ್ಪತ್ ಅವರು ಜೂನ್ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಶಾ ಒಮ್ಮೆಯೂ ಕೋರ್ಟ್ಗೆ ಹಾಜರಾಗದ್ದರ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತೀ ಬಾರಿಯೂ ನಿಮ್ಮ ಕಕ್ಷಿದಾರರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಜೊತೆಗೆ ಮುಂದಿನ ವಿಚಾರಣೆಯನ್ನು ಜೂನ್ 26, 2014ಕ್ಕೆ ನಿಗಧಿ ಪಡಿಸಿದ್ದರು. ಆದರೆ ಜೂನ್ 25ರಂದೇ ಉತ್ಪತ್ ಅವರನ್ನು ಪುಣೆಗೆ ವರ್ಗಾಯಿಸಲಾಗಿತ್ತು.
2010 ಜೂನ್ನಿಂದ 2015ರ ಸೆಪ್ಟಂಬರ್ವರೆಗೆ ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಮೋಹಿತ್ ಶಾ ಕಾರ್ಯ ನಿರ್ವಹಿಸಿದ್ದರು. ಇವರು ನನ್ನ ಸಹೋದರ ಲೋಯಾಗೆ ತಡ ರಾತ್ರಿ ಕರೆ ಮಾಡಿ ನಾಗರಿಕ ಉಡುಪಿನಲ್ಲಿ ಭೇಟಿಯಾಗುವಂತೆ ಹೇಳುತ್ತಿದ್ದರು. ಈ ಪ್ರಕರಣದಲ್ಲಿ ನೀವು ಅನುಕೂಲಕರ ತೀರ್ಪನ್ನು ನೀಡಬೇಕು. ಅದು ನಿಮ್ಮಿಂದ ಸಾಧ್ಯವಿದೆ. ಅದಕ್ಕೆ ಪ್ರತಿಯಾಗಿ ಬೃಹತ್ ಮೊತ್ತದ ಹಣ ನಿಮಗೆ ಸಿಗುವುದಾಗಿ ಹೇಳುತ್ತಿದ್ದರು ಎಂದು ಅನುರಾಧಾ ಹೇಳಿದ್ದಾರೆ.

ಅಲ್ಲದೆ ಮೋಹಿತ್, ಲೋಯಾಗೆ ಡಿಸೆಂಬರ್ 30ರ ಒಳಗೆ ತೀರ್ಪು ನೀಡಿದರೆ ಜನ ಅದನ್ನು ಗಮನಿಸುವುದಿಲ್ಲ.ಯಾಕೆಂದರೆ ಆ ವೇಳೆ ಮತ್ತೊಂದು ಸ್ಫೋಟಕ ಕಥೆ ಇರುತ್ತದೆ ಎಂದಿದ್ದರಂತೆ ಎಂದು ಅನುರಾಧಾ ಹೇಳಿದ್ದಾರೆ. ಈ ವಿಚಾರವಾಗಿ ಲೋಯಾ ಸಾಕಷ್ಟು ಅಸಮಾಧಾನ ಹೊರಹಾಕಿದ್ದು, ನನ್ನ ವೃತ್ತಿಗೆ ನಾನು ರಾಜೀನಾಮೆ ನೀಡಿ, ನನ್ನ ಗ್ರಾಮಕ್ಕೆ ತೆರಳಿ ಕೃಷಿ ಕೆಲಸ ಮಾಡುತ್ತೇನೆ ಎಂದಿದ್ದರು ಎಂದು ಲೋಯಾ ತಂದೆ ಹರಿಕಿಶನ್ ಹೇಳಿದ್ದಾರೆ.
ಲೋಯಾ ಅವರ ಸಾವಿನ ನಂರ ಎಂ.ಬಿ ಗೋಸಾವಿ ಸೊಬ್ರಾಬುದ್ದೀನ್ ಪ್ರಕರಣದ ನ್ಯಾಯಾಧೀಶರಾಗಿ ನೇಮಕಗೊಂಡರು .ಅವರು ಡಿಸೆಂಬರ್ 15ರಿಂದ ಮೂರು ದಿನಗಳ ಕಾಲ ಅಮಿತ್ ಶಾ ಪರ ವಕೀಲರ ಹೇಳಿಕೆಗಳನ್ನು ಕೇಳಿ, ನಂತರ ಸಿಬಿಐ ಹೇಳಿಕೆಗಳನ್ನು 15 ನಿಮಿಷದಲ್ಲಿ ಮುಗಿಸಿದ್ದರು. ಡಿಸೆಂಬರ್ 17ಕ್ಕೆ ವಿಚಾರಣೆ ಪೂರ್ಣಗೊಳಿಸಿದ್ದ ಗೋಸಾವಿ, ಡಿಸೆಂಬರ್ 30ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು.
ಲೋಯಾ ಅವರ ಸಾವಿಗೆ 1ತಿಂಗಳ ನಂತರ ಗೋಸಾವಿ ತನ್ನ ತೀರ್ಪಿನಲ್ಲಿ ಅಮಿತ್ ಶಾ ಪರ ತೀರ್ಪು ಪ್ರಕಟಿಸಿದ್ದರು. ಅಲ್ಲದೆ ಸಿಬಿಐ ರಾಜಕೀಯ ದುರುದ್ದೇಶಗಳಿಂದ ಅಮಿತ್ ಶಾ ಅವರ ಮೇಲೆ ಪ್ರಕರಣ ದಾಖಲಿಸಿತ್ತೆಂದು ತೀರ್ಪು ನೀಡಿದ್ದು, ಅಮಿತ್ ಶಾ ದೋಷಮುಕ್ತ ಎಂದು ಪ್ರಕಟಿಸಿದ್ದರು.
ಕಾಕತೀಳೀಯವೆಂಬಂತೆ ಅದೇ ದಿನ ಎಂ,ಎಸ್ ಧೋನಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಸುದ್ದಿಯನ್ನು ಎಲ್ಲಾ ರಾಷ್ಟ್ರೀಯ ವಾಹಿನಿಗಳು ಪ್ರಸಾರ ಮಾಡಿದ್ದವು. ಅಮಿತ್ ಶಾ ನಿರ್ದೋಷಿ ಎಂಬ ತೀರ್ಪು ಮೂಲೆಗುಂಪಾಗಿತ್ತು.
ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ, ಲೋಯಾರ ಸಾವಿನ ಎರಡೂವರೆ ತಿಂಗಳ ಬಳಿಕ ಅವರ ಮನೆಗೆ ಭೇಟಿ ನೀಡಿದ್ದರು. ಬಳಿಕ ಲೋಯಾ ಅವರ ಮಗ ಅನುಜ್ ಪತ್ರವೊಂದನ್ನು ಬರೆದಿದ್ದು, ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ. ಅವರೇನು ಬೇಕಾದರೂ ಮಾಡಲು ಹೇಸುವುದಿಲ್ಲ. ನನ್ನ ತಂದೆಯ ಸಾವಿನ ಕುರಿತು ತನಿಖಾ ಆಯೋಗ ರಚಿಸಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು. ಜೊತೆಗೆ ನನಗೆ ಅಥವಾ ನನ್ನ ಕುಟುಂಬಕ್ಕೇನಾದರೂ ಆದರೆ ಅದಕ್ಕೆ ಮೋಹಿತ್ ಶಾ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವರೇ ಕಾರಣ ಎಂದು ಬರೆದಿದ್ದಾರೆ ಎಂದು ಕಾರವಾನ್ ಮ್ಯಾಗಜೀನ್ ಪತ್ರಕರ್ತ ನಿರಂಜನ್ ಟಾಕ್ಲೆ ಬರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com