ಒಂದು ರೂಪಾಯಿ ನೋಟಿಗೀಗ ಶತಮಾನೋತ್ಸವದ ಸಂಭ್ರಮ

ದೆಹಲಿ : ಒಂದು ರೂ ಮುಖಬೆಲೆಯ ನೋಟ್‌ ಇಂದಿಗೆ ಶತಮಾನವನ್ನು ಪೂರೈಸಿದೆ. ಮೊಟ್ಟ ಮೊದಲ ಬಾರಿಗೆ 1 ರೂ ನೋಟನ್ನು ರಾಜ 5ನೇ ಜಾರ್ಜ್‌ ಭಾವಚಿತ್ರದೊಂದಿಗೆ 1917ರಲ್ಲಿ ಪರಿಚಯಿಸಲಾಗಿತ್ತು.

ಈ ಒಂದು ರೂ ನೋಟು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಇದನ್ನು ರಿಸರ್ವ್‌ ಬ್ಯಾಂಕ್ ವಿತರಿಸುವುದಿಲ್ಲ ಬದಲಿಗೆ ಭಾರತ ಸರ್ಕಾರ ವಿತರಿಸುತಿತ್ತು. ಮೊದಲನೇ ವಿಶವ ಯುದ್ಧದ ಸಂದರ್ಭದಲ್ಲಿ ನಾಣ್ಯಗಳನ್ನು ಠಂಕಿಸಲು ಸಾಧ್ಯವಾಗದಿದ್ದಾಗ ನೋಟನ್ನು ಮುದ್ರಿಸಿದರು. ರಿಸರ್ವ್‌ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ 1926ರಲ್ಲಿ ಈ ನೋಟಿನ ವಿತರಣೆ ನಿಲ್ಲಿಸಲಾಗಿದ್ದು, 1940ರಲ್ಲಿ ಮರು ಪಚಿಟಯಿಸಲಾಗಿತ್ತು.

ಅಲ್ಲದೆ 1994ರಲ್ಲಿ ಮತ್ತೆ ವಿತರಣೆ ನಿಲ್ಲಿಸಿ 2015ರಲ್ಲಿ ಮತ್ತೆ ಚಲಾವಣೆಗೆ ತರಲಾಗಿತ್ತು. ಇತರೆ ನೋಟುಗಳಂತೆ ಇದಕ್ಕೆ ಆರ್‌ಬಿಐ ಗವರ್ನರ್‌ ಸಹಿ ಮಾಡುವುದಿಲ್ಲ. ಬದಲಿಗೆ ಹಣಕಾಸು ಕಾರ್ಯದರ್ಶಿಗಳು ಇದರ ಮೇಲೆ ಸಹಿ ಮಾಡುತ್ತಾರೆ. ಮೊದಲ ಬಾರಿಗೆ 1ರೂ ನೋಟಿನ ಮೇಲೆ ಬ್ರಿಟಿಷ್ ಅಧಿಕಾರಿಯೊಬ್ಬರು ಸಹಿ ಮಾಡಿದ್ದರು. ಸ್ವಾತಂತ್ರ್ಯಾನಂತರದಿಂದ ಪ್ರತೀ ನೋಟಿನ ಮೇಲೂ ಹಣಕಾಸು ಕಾರ್ಯದರ್ಶಿಗಳೇ ಸಹಿ ಮಾಡುತ್ತಾರೆ.

ಅನೇಕ ಬಾರಿ ಬದಲಾವಣೆಗೊಂಡ 1ರೂ ನೋಟು 2016ರಲ್ಲಿ ಬದಲಾಗಿ ಸದ್ಯ ಅದೇ ನೋಟು ಚಾಲ್ತಿಯಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com