ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‌ಬುಕ್‌ ಮೂಲಕ ಪತ್ತೆಯಾದವು….!!

ಚಿಕ್ಕಬಳ್ಳಾಪುರ : ನಾಪತ್ತೆಯಾಗಿದ್ದ ಎಮ್ಮೆಗಳು ಫೇಸ್‌ಬುಕ್ ಮೂಲಕ ಪತ್ತೆಯಾದ ಘಟನೆ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈಸ್ತೂರು ಗ್ರಾಮದ ನಾರಾಯಣಸ್ವಾಮಿ ಎಂಬುವವರ ಎರಡು ಎಮ್ಮೆಗಳು ನಾಪತ್ತೆಯಾಗಿದ್ದವು. ಎಮ್ಮೆಗಳಿಗಾಗಿ ನಾರಾಯಣಸ್ವಾಮಿ ಸುತ್ತ ಮುತ್ತ ಇರುವ ಗದ್ದೆ. ಕಾಡು ಎಲ್ಲೆಡೆ ಅಲೆದಾಡಿದ್ದಾರೆ. ಆದರೂ ಎಮ್ಮೆಗಳು ಸಿಗದೆ ಹತಾಶರಾಗಿದ್ದರು.

ಆದರೆ ಈ ಎಮ್ಮೆಗಳು ನಾರಾಯಣ ಸ್ವಾಮಿ ಅವರ ಮನೆಯಿಂದ ಸುಮಾರು 10 ಕಿ.ಮೀ ದೂರದ ಕೊಂಡ್ರಹಳ್ಳಿಯಲ್ಲಿ ಕಾಣಿಸಿಕೊಂಡಿದ್ದವು. ಊರಿನಲ್ಲಿ ಹೊಸ ಎಮ್ಮೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದೇ ಗ್ರಾಮದ ನಿವಾಸಿಯಾದ ಮೋಹನ್‌ ಎಮ್ಮೆಗಳಿಗೆ ಮೇವು ನೀಡಿ ಕಟ್ಟಿಹಾಕಿದ್ದರು. ಬಳಿಕ ಮಾಲೀಕರನ್ನು ಹುಡುಕಲು ದಾರಿಕಾಣದೆ ತಮ್ಮ ಫೇಸ್‌ಬುಕ್‌ನಲ್ಲಿ ಈ ಎಮ್ಮೆಗಳು ಯಾರವು ಎಂದು ಫೋಟೊ ಸಮೇತ ಪೋಸ್ಟ್ ಮಾಡಿದ್ದಾರೆ. ಈ ಸ್ಟೇಟಸ್‌ ನೋಡಿದ ಈಸೂರಿಯ ಯುವಕ ಎಮ್ಮೆ ಮಾಲೀಕ ನಾರಾಯಣಸ್ವಾಮಿಯವರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಎಮ್ಮೆಗಳ ಮಾಲೀಕ ಪಕ್ಕದೂರಿಗೆ ತೆರಳಿ ಎಮ್ಮೆಗಳನ್ನು ವಾಪಸ್‌ ಕರೆತಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com