ಬುಮ್ರಾ ಯಶಸ್ಸಿಗೆ ಈ ‘Special Lady’ ಕಾರಣವಂತೆ : ಗುಟ್ಟು ಬಿಚ್ಚಿಟ್ಟ ಬೌಲರ್..!

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುವ ಬುಮ್ರಾ, ಶ್ರೀಲಂಕಾದ ಲಸಿತ್ ಮಾಲಿಂಗಾ ಅವರಿಂದ ಯಾರ್ಕರ್ ಎಸೆಯುವುದನ್ನು ಕಲಿತು ಯಶಸ್ವಿಯಾಗಿದ್ದಾರೆ. ಉತ್ತಮ ಪ್ರದರ್ಶನದ ಮೂಲಕ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಈ ವೇಗಿ, ಗುರುವಾರ ತಮ್ಮ ಯಶಸ್ಸಿನ ಹಿಂದಿರುವ ವ್ಯಕ್ತಿ ಯಾರೆಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ  ಗುರುವಾರ ತಾಯಿ, ದಲ್ಜೀತ್ ಬುಮ್ರಾ ಅವರಿಗೆ ಜಸ್ಪ್ರೀತ್ ಬುಮ್ರಾ  ಜನ್ಮದಿನದ ವಿಷ್ ಮಾಡಿದ್ದಾರೆ. ‘ ಹ್ಯಾಪಿ ಬರ್ತ್ ಡೇ ಅಮ್ಮ. ಜೀವನದಲ್ಲಿ ನಾನು ಏನನ್ನೇ ಪಡೆದಿದ್ದರೂ ಅದಕ್ಕೆಲ್ಲ ಕಾರಣ ನೀನೆ. ನಿನ್ನಂತಹ ಅಮ್ಮನನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೇನೆ. ನನ್ನ ಜೀವನದಲ್ಲಿ ನೀನು ತುಂಬಾ ಸ್ಪೆಷಲ್. Happy birthday to the best mom in the world. ಎಂದು ಬರೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com