ಯಡಿಯೂರಪ್ಪನವರೇ ಹೆಣ್ಮಕ್ಕಳ ಶಾಪ ನಿಮ್ಮನ್ನು ತಟ್ಟದೇ ಬಿಡುವುದಿಲ್ಲ….. : ಶೋಭಾ

ಬೆಂಗಳೂರು : ನಿಮಗೂ ಹೆಣ್ಣು ಮಕ್ಕಳು, ಸೊಸೆಯರಿದ್ದಾರೆ. ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ . ಅದು ನಿಮ್ಮನ್ನು ತಟ್ಟದೇ ಬಿಡುವುದಿಲ್ಲ ಎಂದು ಬಿಜೆಪಿ ಮಾಧ್ಯಮ ಸಂಚಾಲಕ ವಿನಯ್ ಅವರ ಪತ್ನಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ವಿನಯ್‌ ಕುಲಕರ್ಣಿ ಅವರ ಅಪಹರಣ ಪ್ರಕರಣ ಸಂಬಂಧ ಬಿಎಸ್‌ವೈ ಅವರಿಗೆ ವಿನಯ್‌ ಪತ್ನಿ ಶೋಭಾ ಪತ್ರ ಬರೆದಿದ್ದು, ಯಡಿಯೂರಪ್ಪ ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಗಂಡನ ಸ್ನೇಹ ಬೆಳೆಸಿ ಸಂತೋಷ ರಾಜಕೀಯವಾಗಿ ಬೆಳೆದು ನನ್ನ ಗಂಡನನ್ನೇ  ಕೊಲೆ ಮಾಡಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪನವರೇ ನಿಮಗೆ ಕರುಣೆ ಇಲ್ವಾ ?. ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸೊಸೆಯರಿದ್ದಾರೆ. ಅವರಿಗೂ ಹೀಗೆ ಆದರೆ ಸುಮ್ಮನಿರುತ್ತೀರಾ..? ನನ್ನ ಜಾಗದಲ್ಲಿ ನಿಮ್ಮ ಮನೆ ಹೆಣ್ಣು ಮಕ್ಕಳಿದ್ದರೆ ಏನು ಮಾಡುತ್ತಿದ್ದಿರಿ. ಉತ್ತರ ಕೊಡಿ ಎಂದು ಪತ್ರ ಬರೆದಿದ್ದಾರೆ.

ನೀವು ಸಂತೋಷ್‌ ಪರ ನಿಂತಿದ್ದೀರಿ. ನಮ್ಮನೆ ಅನ್ನ ತಿಂದು ನನ್ನ ಗಂಡನಿಗೇ ಮೋಸ ಮಾಡಿದರು.. ಪೊಲೀಸರು ಸಂತೋಷ್‌ನನ್ನು ಹಿಡಿಯಲು ಬಂದಾಗ ಬೇಲ್‌ ಕೊಡಿಸಿ ಕಾಪಾಡಿದಿರಿ. ಇದೇನಾ ಕಾನೂನಿಗೆ ಕೊಡುವ ಗೌರವ. ಏನೂ ತಪ್ಪು ಮಾಡದ ನನ್ನ ಗಂಡನನ್ನು ನೀವು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ನಿಮ್ಮದು ಪ್ರಾಮಾಣಿಕ ಹೋರಾಟವಾಗಿರಬೇಕೇ ಹೊರತು ರಾಜಕೀಯವಾಗಿರಬಾರದು ಎಂದಿದ್ದಾರೆ.

ಜೊತೆಗೆ ನಿಮ್ಮ ಬಳಿ ಅಧಿಕಾರವಿದೆ. ಹಣಬಲವಿದೆ. ಆದರೆ ನಾವು ಬಡವರು, ನೀವು ಕೋರ್ಟ್‌, ಕಚೇರಿಗೆ ಅಲೆದಾಡಿ ನಿಮಗೆ ಅಭ್ಯಾಸವಿದೆ. ಆದರೆ ನಮ್ಮ ಪ್ರಾಮಾಣಿಕತೆಗೆ ನ್ಯಾಯ ಸಿಗುತ್ತದೆಂಬ ಭರವಸೆ ಇದೆ. ಹೋರಾಡುವುದಾದರೆ ಮುಂದಿನಿಂದ ಹೋರಾಡಿ. ಪ್ರಾಣ ತೆಗೆಯುವ ಕೆಲಸ ಮಾಡಬೇಡಿ. ಇಂದಿನಿಂದ ಯಾವುದಕ್ಕೂ ಹೆದರುವುದಿಲ್ಲ. ಒಳ್ಳೆಯದು, ಕೆಟ್ಟದ್ದನ್ನು ದೇವರು ನೋಡಿಕೊಳ್ಳುತ್ತಾನೆ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com