ಓಬವ್ವ, ರಾಣಿ ಚೆನ್ನಮ್ಮ ಬಗ್ಗೆ ಪ್ರಕಟವಾದ ಪೋಸ್ಟ್‌ಗೂ ನನಗೂ ಸಂಬಂಧವಿಲ್ಲ : ಪ್ರತಾಪ್‌ ಸಿಂಹ

ಬೆಂಗಳೂರು : ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮರಿಗೆ ಸಂಬಂಧಿಸಿದಂತೆ ಪ್ರಕಟವಾದ ಫೇಸ್‌ಬುಕ್‌ ಪೋಸ್ಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಾಪ್‌ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಫೇಸ್ಬುಕ್‌ ಲೈವ್‌ನಲ್ಲಿ ಮಾತನಾಡಿದ ಪ್ರತಾಪ್‌ ಸಿಂಹ, ಇಂಟರ್‌ನೆಟ್ ಎಂಬುದು ಫ್ರೀ ಮೀಡಿಯಾ, ಅಲ್ಲಿ ಯಾರು ಯಾರ ಪರ, ವಿರುದ್ಧ ಬೇಕಾದರೂ ಪೋಸ್ಟ್‌ಗಳನ್ನು ಹಾಕಬಹುದು. ಇದಜು ಯಾರ ಹಿಡಿತದಲ್ಲೂ ಇರುವುದಿಲ್ಲ ಎಂದಿದ್ದಾರೆ. 13 ವರ್ಷದ ನನ್ನ ಪತ್ರಿಕೋದ್ಯಮ ವೃತ್ತಿಯಲ್ಲಿ ನಾನು ಚೆನ್ನಮ್ಮ, ಓಬವ್ವರ ಕುರಿತು ಜನರಿಗೆ ಅಭಿಮಾನ ಹುಟ್ಟುವ ಹಾಗೆ ಬರೆದಿದ್ದೇನೆ. ಅದನ್ನು ಓದಿದ ನನ್ನ ಅಭಿಮಾನಿಗಳಿಗೆ ನಾನು ಏನೆಂದು ಗೊತ್ತು. ಅವರು ಇಂತಹ ನಾಲಾಯಕ್‌ ಕೆಲಸ ಮಾಡುವುದಿಲ್ಲ. ಅವರು ನನ್ನ ಅಭಿಮಾನಿಗಳಾಗಲೂ ಸಾಧ್ಯವಿಲ್ಲ ಎಂದಿದ್ದಾರೆ.

ನನ್ನದೇ ತಪ್ಪಿದ್ದರೆ ಅದನ್ನು ಬಿಂಬಿಸಿ. ಆದರೆ ಯಾರೋ ಮಾಡಿದ ಪೋಸ್ಟಿಗೆ ನನ್ನನ್ನು ಎಳೆದು ತರಬೇಡಿ. ಅದನ್ನು ಪೋಸ್ಟ್‌ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ ಎಂದಿದ್ದಾರೆ. ನನ್ನ ಫೇಸ್‌ಬುಕ್‌ ಅಕೌಂಟ್‌ನಲ್ಲಿ ನನ್ನ ಕೆಲಸಗಳು, ನನ್ನ ಅಭಿಪ್ರಾಯಗಳನ್ನು ಮಾತ್ರ ಹಾಕುತ್ತೇನೆ. ಆದರೆ ಇದು ನನ್ನ ಕೆಲಸವಲ್ಲ ಎಂದಿದ್ದಾರೆ.

Leave a Reply

Your email address will not be published.