ಪ್ರಧಾನಿ ಮೋದಿ ಅಮಿತಾಬ್‌ ಬಚ್ಚನ್‌ಗಿಂತ ದೊಡ್ಡ ನಟ : ರಾಹುಲ್‌ ಗಾಂಧಿ

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅಮಿತಾಬ್ ಬಚ್ಚನ್‌ ಅವರಿಗಿಂತಲೂ ದೊಡ್ಡ ನಟ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಬಾಲಿವುಡ್‌ ಬಿಗ್‌ ಬಿ ಗಿಂತ ಉತ್ತಮ ನಟ. ಸಾರ್ವಜನಿಕ ಸ್ಥಳಗಳಲ್ಲಿ ದುಃಖಭರಿತ ದೃಶ್ಯಗಳಲ್ಲಿ ಅಭಿನಯಿಸಲು ಅವರಿಗೆ ಅಮಿತಾಬ್‌ರಂತೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಗತ್ಯವಿಲ್ಲ ಎಂದು ವ್ಯಂಗ್ಯಾವಾಡಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದ ಕೆಲ ದಿನಗಳ ನಂತರ ಮೋದಿ ಕಣ್ಣೀರು ಹಾಕಿದ್ದರು. ಬಳಿಕ ಡಿಸೆಂಬರ್‌ 31ರ ಒಳಗೆ ಕಾಳಧನ ಬರದೇ ಇದ್ದಲ್ಲಿ ನೀವು ನನಗೆ ಏನಾದರೂ ಶಿಕ್ಷೆ ನೀಡಿ ಎಂದಿದ್ದರು. ಮತ್ತೆ ಮತ್ತೆ ಕಣ್ಣೀರು ಸುರಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಾಗೆ ಮಾಡುತ್ತೇನೆ. ಹೀಗೆ ಮಾಡುತ್ತೇನೆ ಎಂದು ಏನೇನೋ ಭರವಸೆ ನೀಡಿದ್ದರು. ಆದರೆ ಯಾವುದೂ ನೆರವೇರಿಲ್ಲ ಎಂದು ಟೀಕಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com