WATCH : ಪದ್ಮಾವತಿಯ ಘೂಮರ್‌ ಘೂಮರ್‌ ಹಾಡಿಗೆ ಹೆಜ್ಜೆ ಹಾಕಿದ ಮುಲಾಯಂ ಸೊಸೆ….

ಲಖನೌ : ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಅವರ ಕಿರಿಯ ಸೊಸೆ ಅಪರ್ಣ ಯಾದವ್‌ ಪದ್ಮಾವತಿ ಸಿನಿಮಾದ ಘೂಮರ್‌ ಘೂಮರ್‌ ಹಾಡಿಗೆ ನೃತ್ಯ ಮಾಡಿದ್ದು ಎಲ್ಲೆಡೆ ವೈರಲ್‌ ಆಗಿದೆ.

ಪದ್ಮಾವತಿ ಸಿನಿಮಾ ಬಗ್ಗೆ ಈಗಗಾಲೆ ಸಾಕಷ್ಟು ವಿವಾದ ಸೃಷ್ಠಿಯಾಗಿದ್ದು ಸಿನಿಮಾ ಕುರಿತಂತೆ ದೀಪಿಕಾ ಹಾಗೂ ಬನ್ಸಾಲಿ ಅವರಿಗೆ ಬೆದರಿಕೆಗಳು ಬರುತ್ತಲೇ ಇವೆ. ಇದೇ ಕಾರಣಕ್ಕಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದೆ.

ಇಷ್ಟೆಲ್ಲ ಗಲಾಟೆ ನಡೆಯುತ್ತಿರುವ ಮಧ್ಯೆ ಉತ್ತರ ಪ್ರದೇಶದ ಮಾಜಿ ಸಿಎಂ ಸೊಸೆ ಅಪರ್ಣಾ ಪದ್ಮಾವತಿ ಸಿನಿಮಾದ ಗೂಮರ್‌ ಗೂಮರ್‌ ಹಾಡಿಗೆ ನೃತ್ಯ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಪರ್ಣಾ ತನ್ನ ಸೋದರನ ನಿಶ್ಚಿತಾರ್ಥದ ವೇದಿಕೆಯಲ್ಲಿ ನೃತ್ಯ ಮಾಡಿದ್ದು, ಪದ್ಮಾವತಿ ಸಿನಿಮಾದ ವಿರೋಧಿಗಳು ಅಪರ್ಣಾ ವಿರುದ್ದ ಗರಂ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com