ತುಮಕೂರು : ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ದಲಿತ ಮುಖಂಡ

ತುಮಕೂರು : ನಾವು ದಲಿತರೆಲ್ಲ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂದು ದಲಿತ ಮುಖಂಡರೊಬ್ಬರು ಎಐಸಿಸಿಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

 

ಕುಣಿಗಲ್‌ನ ದಲಿತ ಮುಖಂಡ ನಗುತಾ ರಂಗನಾಥ್‌ ಅವರು ರಕ್ತದಲ್ಲಿ ಪತ್ರ ಬರೆದಿದ್ದು, ಡಿಕೆ ಬ್ರದರ್ಸ್‌ ಕುಣಿಗಲ್‌ನಲ್ಲಿ ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿರುವ ಇವರು, ದಲಿತರೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಒಡಕಿಲ್ಲ. ಹಾಗೂ ಡಿ.ಕೆ ಬ್ರದರ್ಸ್‌ ನಮ್ಮನ್ನು ಕಡೆಗಣಿಸಿಲ್ಲ. ಇದನ್ನು ನಮ್ಮ ರಕ್ತದಲ್ಲಿ ಬರೆದು ನಿಮಗೆ ಕಳುಹಿಸುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published.