ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದ ಉತ್ತರ ಕೊರಿಯಾ !!

ಪ್ಯಾಂಗ್‌ಯಾಂಗ್ : ಯುದ್ದೋತ್ಸಾಹದಲ್ಲಿರುವ ಉತ್ತರ ಕೊರಿಯಾ ವಿಶ್ವದ ರಾಷ್ಟ್ರಗಳನ್ನು ಎದುರು ಹಾಕಿಕೊಂಡು ಮತ್ತೊಂದು ಪ್ರಬಲ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ತನ್ನ ಮೊಂಡುತನವನ್ನು ಮುಂದುವರಿಸಿದೆ.

ಈ ಕ್ಷಿಪಣಿ ಅಮೆರಿಕವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ಅಮೆರಿಕವನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದೆ. ಮೂಲಗಳ ಪ್ರಕಾರ ಉತ್ತರ ಕೊರಿಯಾ ಮಂಗಳವಾರ ರಾತ್ರಿ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ ಮಾಡಿದ್ದು, ಇದು 2800 ಕಿ.ಮೀ ಚಲಿಸಿ ಜಪಾನ್‌ನ ಸಮುದ್ರ ವಲಯದಲ್ಲಿ ಬಿದ್ದಿದೆ ಎನ್ನಲಾಗಿದೆ.

ಉತ್ತರ ಕೊರಿಯಾದ ಐಸಿಬಿಎಂ ಹಾಸ್ವಾಂಗ್‌ -15 ಕ್ಷಿಪಣಿ, ಉತ್ತರಕೊರಿಯಾ ಬಳಿ ಇರುವ ದೂರಗಾಮಿ ಪ್ರಬಲ ಕ್ಷಿಪಣಿಯಾಗಿರುವುದಾಗಿ ಹೇಳಲಾಗುತ್ತಿದೆ. ಜೊತೆಗೆ ಕ್ಷಿಪಣಿ ಉಡಾವಣೆ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com