ಶಾರುಕ್‌ ಖಾನ್‌ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ದೀಪಿಕಾ…ಆಗಿದ್ದೇನು..?

ಬಾಲಿವುಡ್ ಬಾದ್‌ ಶಾ ಶಾರುಕ್‌ ಖಾನ್‌ ಅವರಿಗೆ ತಮ್ಮ ಜೊತೆಗಿರುವವರನ್ನು ಸದಾ ಕಂಫರ್ಟಬಲ್‌ ಆಗಿರುವಂತೆ ನೋಡಿಕೊಳ್ಳುತ್ತಾರಂತೆ. ಅಲ್ಲದೆ ಹೊಸ ನಟ -ನಟಿಯರಿಗೆ ಉತ್ತಮ ಮಾರ್ಗದರ್ಶಕರಾಗಿಯೂ ಶಾರುಕ್‌ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೇ ಗೋಲ್ಡನ್‌ ದೀವಾಸ್‌ ಅರ್ಪಿಸುವ ಬಾತೇ ವಿತ್ ಬಾದ್‌ ಶಾ ರಿಯಾಲಿಟಿ ಶೋನಲ್ಲಿ ದೀಪಿಕಾ ಪಡುಕೋಣೆ ಬಂದಿದ್ದರು. ಈ ವೇಳೆ ದೀಪಿಕಾ ತನ್ನ ತಾಯಿ ಉಜಾಲಾ ಅವರ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಈ ವೇಳೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಶಾರುಖ್‌ ಎದ್ದು ಬಂದು ದೀಪಿಕಾ ಕಣ್ಣೀರು ಒರೆಸಿದ್ದಾರೆ.

* ^^ ????❤️ . #DeepikaPadukone

A post shared by Deepika Padukone ♡ (@deepikaworldwide) on

* ^^ Video: teamdeepikamySanjay Leela Bhansali's letter to @deepikapadukone ❤️????

A post shared by Deepika Padukone ♡ (@deepikaworldwide) on

ಉಜಾಲಾ ಪಡುಕೋಣೆ ದೀಪಿಕಾ ಅವರ ಯಶಸ್ಸಿನ ಕುರಿತು ಪತ್ರವೊಂದನ್ನು ಬರೆದಿದ್ದರು. ಆ ಪತ್ರವನ್ನು ಶಾರುಖ್‌ ಕಾರ್ಯಕ್ರಮದಲ್ಲಿ ಎಲ್ಲರೆದುರು ಓದಿದ್ದಾರೆ. ನೀನು ನಿನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೀಯ. ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ. ನೀನು ನಿನ್ನ ವೃತ್ತಿ ಜೀವನ ಹಾಗೂ ವೈಯಕ್ತಿಯ ಜೀವನವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತೀಯ ಎಂಬ ನಂಬಿಕೆಯಿದೆ ಎಂದು ಬರೆದಿದ್ದರು. ಇದನ್ನು ಕೇಳಿದ ದೀಪಿಕಾ ಕಣ್ಣೀರು ಹಾಕಿದ್ದಾರೆ.

ತಕ್ಷಣ ಶಾರುಕ್‌ ದೀಪಿಕಾ ಕಣ್ಣೀರು ಒರೆಸಿ, ಆಕೆಯನ್ನು ಸಮಾಧಾನ ಪಡಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಶಾರುಕ್‌ ಶಾನ್‌ ಬಗ್ಗೆ ಇದ್ದ ಅಭಿಮಾನ ಹೆಚ್ಚಾಗಿದೆ.

 

Leave a Reply

Your email address will not be published.