ಮೂಗುಮುಚ್ಚಿಕೊಂಡು ಇಂದಿರಾ ಗಾಂಧಿಯವರನ್ನು ಅಣಕಿಸಿದ ಮೋದಿ..!!

ಗಾಂಧಿನಗರ : ಗುಜರಾತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಪ್ರಧಾನಿ ಮೋದಿ ಇಂದು ರ್ಯಾಲಿ ನಡೆಸಿದ್ದಾರೆ. ರ್ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿರುವ ಮೋದಿ, ದೇಶವನ್ನು ಲೂಟಿ ಮಾಡಿದವರು ಮಾತ್ರ ಡಕಾಯಿತಿಯ ಬಗ್ಗೆ ಮಾತನಾಡಲು ಸಾಧ್ಯ ಎಂದಿದ್ದಾರೆ.

ಇದೇ ವೇಳೆ ಇಂದಿರಾಗಾಂಧಿ ಕುರಿತು ಮಾತನಾಡಿದ ಮೋದಿ ನನಗೀಗಲೂ ನೆನಪಿದೆ. ಇಂದಿರಾ ಗಾಂಧಿ ಮೊರ್ಬಿಗೆ ಬಂದಿದ್ದಾಗ ಮೂಗಿಗೆ ಕರವಸ್ತ್ರ ಮುಚ್ಚಿಕೊಂಡು ಸಂಚರಿಸಿದ್ದರು. ಆ ಫೋಟೋ ಚಿತ್ರಲೇಖ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಎಂದು ಮೂಗನ್ನು ಮುಚ್ಚಿಕೊಂಡು ಕಾಂಗ್ರೆಸ್‌ನವರು ಹಾಗೂ ಇಂದಿರಾಗಾಂಧಿಯವರನ್ನು ಅಣಕಿಸಿದ್ದಾರೆ. ಆದರೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರಿಗೆ ಎಂದೂ ಹಾಗನಿಸಲಿಲ್ಲ. ನಮಗೆ ಆ ರಸ್ತೆಗಳೇ ಸುವಾಸನೆ ಬೀರುತ್ತಿವೆ. ಮಾನವೀಯತೆಯ ಸುವಾಸನೆ ಅದು ಎಂದಿದ್ದಾರೆ.

ಬಿಜೆಪಿಯ ಗುರಿ ಕೆಲಸ ಮಾಡುವುದೇ ಹೊರತು ಚುನಾವಣೆಯಲ್ಲ. ಕಾಂಗ್ರೆಸ್‌ನವರು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com