ಫಾರೂಕ್‌ ಅಬ್ದುಲ್ಲಾಗೆ ಕಪಾಳ ಮೋಕ್ಷ ಮಾಡಬೇಕೆನ್ನುವುದೇ ನನ್ನ ಕನಸು : ಸೂರಜ್‌ ಪಾಲ್‌

ದೆಹಲಿ : ಪದ್ಮಾವತಿ ಸಿನಿಮಾ ವಿವಾದ ಕುರಿತಂತೆ ನಟಿ ದೀಪಿಕಾ ಹಾಗೂ ಬನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಹರಿಯಾಣ ಬಿಜೆಪಿ ಮುಖಂಡ ಸೂರಜ್‌ ಪಾಲ್‌ ಅಮೂ ಮಾಧ್ಯಮ ಸಂಯೋಜಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಾನು ತುಂಬಾ ನೋವಿನಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತದ್ದೇನೆ. ಹರಿಯಾಣ ಸಿಎಂ ವರ್ತನೆ ನನಗೆ ಬಹಳ ನೋವುಂಟು ಮಾಡಿದೆ. ಪಕ್ಷದ ಹಿರಿಯರನ್ನು ಗೌರವಿಸದ ಮುಖ್ಯಮಂತ್ರಿಯನ್ನು ನಾನೆಂದೂ ನೋಡಿರಲಿಲ್ಲ ಎಂದು ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಕಾಶ್ಮೀರ ಸಮಸ್ಯೆ ಕುರಿತು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸುತ್ತಿರುವ ನ್ಯಾಷನಲ್‌ ಕಾಂಗ್ರೆಸ್‌ನ ಮುಖ್ಯಸ್ತ ಫಾರೂಕ್‌ ಅಬ್ದುಲ್ಲಾ ಅವರಿಗೆ ಕಪಾಳ ಮೋಕ್ಷ ಮಾಡಬೇಕು. ಅಲ್ಲಿಯವರೆಗೂ ನನಗೆ ಸಮಾಧಾನವಿಲ್ಲ. ಇದೇ ನನ್ನ ಕನಸು ಎಂದಿದ್ದಾರೆ.

ಇತ್ತೀಚೆಗಷ್ಟೇ ಫಾರುಕ್‌ ಅಬ್ದುಲ್ಲಾ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲ, ಮೊದಲು ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರುವುದನ್ನು ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com