Serial ಸೀನ್‌ ಅನುಕರಣೆ : ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು

ದಾವಣಗೆರೆ : ಧಾರಾವಾಹಿಯ ಗೀಳು ಹಿಡಿಸಿಕೊಂಡಿದ್ದ ಬಾಲಕಿಯೊಬ್ಬಳು ಪಾತ್ರಧಾರಿಯಂತೆ ಮಾಡಲು ಹೋಗಿ ಬೆಂಕಿ ಹಚ್ಚಿಕೊಂದು ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತ ಮಗುವಿನ ಹೆಸರು ಪ್ರಾರ್ಥನಾ ಎಂದು ತಿಳಿದುಬಂದಿದೆ. ಬಾಲಕಿ ಎರಡನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿನಿತ್ಯ ಧಾರಾವಾಹಿ ನೋಡುತ್ತಿದ್ದಳು. ಅಂತೆಯೇ ನವೆಂಬರ್‌ 11ರಂದು ಸಹ ಧಾರಾವಾಹಿಯನ್ನು ನೋಡಿ ಬಳಿಕ ಧಾರಾವಾಹಿಯಲ್ಲಿನ ಪಾತ್ರಧಾರಿಯೊಬ್ಬರು ಬೆಂಕಿ ಹಚ್ಚಿಕೊಳ್ಳುವ ದೃಶ್ಯದಿಂದ ಪ್ರಭಾವಿತಗೊಂಡು ಅದನ್ನೇ ಅನುಕರಣೆ ಮಾಡಿದ್ದಾಳೆ.

ಪ್ರಾರ್ಥನಾ ಧಾರಾವಾಹಿಗೆ ಅಡಿಕ್ಟ್‌ ಆಗಿದ್ದಳು. ಕಳೆದ ನವೆಂಬರ್‌ 11ರಂದು ಬಾಲಕಿ ಅನುಕರಣೆ ಮಾಡಿ ಸಾವಿಗೀಡಾಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಪ್ರಾರ್ಥನಾ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com