ರಿಟೈರ್ ಆಯ್ತು ಸಚಿನ್ ಧರಿಸುತ್ತಿದ್ದ ನಂ.10 ಜೆರ್ಸಿ : BCCI ಕೊಟ್ಟ ಕಾರಣವೇನು..?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಧರಿಸಿ ಆಡುತ್ತಿದ್ದ ಜೆರ್ಸಿ ಇನ್ನು ಮುಂದೆ ಟೀಮ್ ಇಂಡಿಯಾದ ಬೇರೆ ಆಟಗಾರರು ಧರಿಸುವ ಹಾಗಿಲ್ಲ. ನಂ.10 ಅನಧಿಕೃತವಾಗಿ ರಿಟೈರ್ ಮಾಡಿರುವ ಬಿಸಿಸಿಐ ತನ್ನ ನಿರ್ಧಾರಕ್ಕೆ ಸ್ಪಷ್ಟನೆಯನ್ನೂ ನೀಡಿದೆ.

Image result for sachin jersey 10

‘ ಯಾವೊಬ್ಬ ಆಟಗಾರನೂ ಸಚಿನ್ ಅವರ ನಂ.10 ಜೆರ್ಸಿಯನ್ನು ಧರಿಸಲು ಸಿದ್ಧರಿಲ್ಲ. ಅದು ಅವರವರ ವೈಯಕ್ತಿಕ ಆಯ್ಕೆ. ನಂ.10 ರ ಜೆರ್ಸಿಯನ್ನು ಧರಿಸಲು ಬಯಸದಿದ್ದರೆ, ನಾವು ಬಲವಂತ ಮಾಡಲು ಸಾಧ್ಯವಿಲ್ಲ. ಯಾವುದೇ ನಂಬರಿನ ಜೆರ್ಸಿಯನ್ನು ಅಧಿಕೃತವಾಗಿ ರಿಟೈರ್ ಮಾಡಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳುತ್ತದೆ. ಆದರೆ ಒಂದು ನಿರ್ದಿಷ್ಟ ನಂಬರಿನ ಜೆರ್ಸಿಯನ್ನು ಧರಿಸಲೇಬೇಕೆಂದು ಕಡ್ಡಾಯ ನಿಯಮವನ್ನೂ ಸಹ ಐಸಿಸಿ ಹೇರುವುದಿಲ್ಲ ‘

‘ ನಂ.10 ಜೆರ್ಸಿಯನ್ನು ರಿಟೈರ್ ಮಾಡಲು ಬಿಸಿಸಿಐ ಅಧಿಕೃತವಾಗಿ ಮುಂದಾಗಿಲ್ಲ. ಆದರೆ ಈ ನಿಯಮ ಆಟಗಾರರ ಮಧ್ಯೆ ಅನೌಪಚಾರಿಕವಾಗಿ ಜಾರಿಯಲ್ಲಿದೆ. ಶಾರ್ದೂಲ್ ಠಾಕೂರ್ ಟೀಕೆಗೆ ಗುರಿಯಾದಂತೆ ಬೇರೆ ಆಟಗಾರರಿಗೆ ಆಗುವುದನ್ನು ನಾವು ಬಯಸುವುದಿಲ್ಲ ‘ ಎಂದು ಹೇಳಿದೆ.

Image result for sachin jersey 10

ಶ್ರೀಲಂಕಾ ವಿರುದ್ಧದ ತಾವಾಡಿದ ಮೊದಲ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ನಂ.10 ಜೆರ್ಸಿ ಧರಿಸಿದ್ದಕ್ಕೆ, ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ಎದುರಿಸಬೇಕಾಗಿ ಬಂದಿತ್ತು.

Leave a Reply

Your email address will not be published.

Social Media Auto Publish Powered By : XYZScripts.com