Bangalore : ವೃದ್ದ ದಂಪತಿಯ ಕೈ ಕಾಲು ಕಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!

ಬೆಂಗಳೂರು : ಬೆಂಗಳೂರಿನ ಎಚ್‌ಎಎಲ್‌ ಬಳಿ ವೃದ್ದ ದಂಪತಿಗಳ ಕೈಕಾಲು ಕಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೃತ ವೃದ್ದರನ್ನು ಗೋವಿಂದನ್ ಹಾಗೂ ಸರೋಜ ಎಂದು ಗುರುತಿಸಲಾಗಿದೆ.

ಎರಡು ದಿನಗಳ ಹಿಂದೆಯೇ ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಎರಡು ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಕ್ಕ ಪಕ್ಕದವರು ಎಚ್‌ಎಎಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ವೃದ್ದ ದಂಪತಿಗಳ ಶವ ಪತ್ತೆಯಾಗಿದೆ.

ದಂಪತಿಯ ಕೈಕಾಲು ಕಟ್ಟಿ ಅವರನ್ನು ಹತ್ಯೆ ಮಾಡಿರುವ ಹಂತಕರು, ಅವರ ಬಳಿಯಿದ್ದ ಒಡವೆ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಗೋವಿಂದನ್‌ ಬಿಇಎಲ್‌ನಲ್ಲಿ ನೌಕರರಾಗಿದ್ದು ಉದ್ಯೋಗದಿಂದ ನಿವೃತ್ತಿ ಹೊಂದಿದ್ದರು. ಮಕ್ಕಳನ್ನು ಅವಲಂಬಿಸದೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಅಲ್ಲದೆ ಮಗಳು ಉಷಾ ಜೊತೆ ತಂದೆ ತಾಯಿ ಅನ್ಯೂನ್ಯವಾಗಿದ್ದರು. ಪೊಲೀಸರು ಬಂದ ಬಳಿಕವೇ ಉಷಾಗೂ ಸಹ ತಂದೆ ತಾಯಿಯ ಹತ್ಯೆಯ ಬಗ್ಗೆ ವಿಷಯ ತಿಳಿದಿದೆ.

ದಂಪತಿಯ ಹತ್ಯೆ ಮಾಡುವಾಗ ಮುಖ ಹಾಗೂ ಕೈ-ಕಾಲಿಗೆ ಬಟ್ಟೆ ಕಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಬಳಿಕ ಚಿನ್ನಾಭರಣಗಳನ್ನು ಲೂಟಿ ಮಾಡಿರುವುದಾಗಿ ನಗರ ಪೊಲೀಸ್‌ ಆಯುಕ್ತ ಸುನಿಲ್ ಕುಮಾರ್‌ ಹೇಳಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published.

Social Media Auto Publish Powered By : XYZScripts.com