ಮಂಚಕ್ಕೆ ಬರದಲೊಪ್ಪದ ಪ್ರೇಯಸಿಗೆ ಪ್ರಿಯಕರ ಮಾಡಿದ್ದಾದರೂ ಏನು…?

ತುಮಕೂರು : ಪ್ರೇಯಸಿ ಮಂಚಕ್ಕೆ ಬರಲಿಲ್ಲ ಎಂಬ ಕಾರಣದಿಂದ ಸಿಟ್ಟಿಗೆದ್ದ ಪ್ರಿಯಕರ ಆಕೆಯನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಿಯಕರ ಹನುಮಂತೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳನ್ನು ರಾಜಮ್ಮ ಎಂದು ಗುರುತಿಸಲಾಗಿದೆ.

ರಾಜಮ್ಮಳಿಗೆ ಮದುವೆಯಾಗಿ 9 ವರ್ಷ ಕಳೆದಿತ್ತು. ಪತಿ ಕೆಲ ವರ್ಷಗಳ ಹಿಂದೆ ಸಾವಿಗೀಡಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತೇಗೌಡನಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು ಆತನಿಗೂ ಇಬ್ಬರು ಮಕ್ಕಳಿದ್ದಾರೆ.

 

ಹನುಮಂತೇಗೌಡ ಗಾರೆ ಕೆಲಸದ ವೃತ್ತಿ ಮಾಡುತ್ತಿದ್ದು, ರಾಜಮ್ಮಳ ಮನೆಗೆ ಕೆಲಸಕ್ಕೆಂದು ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿದೆ. ಎರಡು ತಿಂಗಳ ಹಿಂದೆ ಆತ ಮತ್ತೆ ರಾಜಮ್ಮಳನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿ ಆತನಿಂದ ದೂರವಾಗಿದ್ಧಳು.

ಆದರೆ ನವೆಂಬರ್‌ 9ರಂದು ರಾಜಮ್ಮಳನ್ನು ಪುಸಲಾಯಿಸಿ ತನ್ನ ಮನೆಗೆ ಕರೆದಿದ್ದಾನೆ. ಮನೆಗೆ ಬಂದ ರಾಜಮ್ಮಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧಿಸಿದಾ ದೊಣ್ಣೆಯಿಂದ ತಲೆಗೆ ಹೊಡೆದಿದ್ದು, ರಾಜಮ್ಮ ಕುಸಿದುಬಿದ್ದು ಸಾವಿಗೀಡಾಗಿದ್ದಾಳೆ. ಬಳಿಕ ತನ್ನ ಕೃತ್ಯ ಯಾರಿಗೂ ತಿಳಿಯದಿರಲು ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಯೊಳಗೆ ರಾಜಮ್ಮಲ ಮೃತದೇಹವನ್ನು ಹೂತಿಟ್ಟಿದ್ದಾನೆ.

ಬಳಿಕ ರಾಜಮ್ಮ ಸಹೋದರಿ ಆಕೆ ಕಾಣೆಯಾಗಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ತನಿಖೆ ವೇಳೆ ವಿಷಯ ತಿಳಿದಿದೆ. ಸದ್ಯ ಶವವನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com