Social Media ದಲ್ಲಿ ಹರಿದಾಡಿದ ಅಕ್ಮಲ್ ಸಾವಿನ ಸುದ್ದಿ : ಇನ್ನೂ ಬದ್ಕಿದೀನಿ ಅಂದ ಕ್ರಿಕೆಟರ್..!

ನೆರೆರಾಷ್ಟ್ರ ಪಾಕ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೆಲ್ಲ ಬೆಚ್ಚಿ ಬೀಳುವಂತಹ ಸುದ್ದಿ ಹರಿದಾಡುತ್ತಿತ್ತು. ಎರಡು ದಿನಗಳ ಹಿಂದೆ ಕ್ರಿಕೆಟರ್ ಉಮರ್ ಅಕ್ಮಲ್ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಅದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ವಿಡಿಯೋ ಪೋಸ್ಟ್ ಮಾಡುವುದರ ಮೂಲಕ ಪ್ರತಿಕ್ರಿಯೆ ನೀಡಿರುವ ಅಕ್ಮಲ್, ‘ ಅಲ್ಹಮ್ದುಲಿಲ್ಲಾಹ್, ನಾನು ಸಂಪೂರ್ಣವಾಗಿ ಸುರಕ್ಷಿತನಾಗಿದ್ದು, ಲಾಹೋರಿನಲ್ಲಿ ಚೆನ್ನಾಗಿದ್ದೀನಿ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ನನ್ನ ಸಾವಿನ ಸುದ್ದಿ ಸಂಪೂರ್ಣ ಸುಳ್ಳು. ಇಂತಹ ಸುಳ್ಳು ಸುದ್ದಿಗಳನ್ನು ದಯವಿಟ್ಟು ಹಬ್ಬಿಸಬೇಡಿ. ನ್ಯಾಷನಲ್ 20ಕಪ್ 2017 ಸೆಮಿಫೈನಲ್ ನಲ್ಲಿ ನಾನು ಆಡುವುದನ್ನು ಲೈವ್ ಆಗಿ ನೋಡಲಿದ್ದೀರಿ, ಥ್ಯಾಂಕ್ಯೂ ವೆರಿ ಮಚ್ ‘ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com