WATCH : ಜ್ಯಾಕ್ ಮದುವೆಯಲ್ಲಿ ಕುಣಿದು ಸಂಭ್ರಮಿಸಿದ ಕೊಹ್ಲಿ, ಅನುಷ್ಕಾ : ‘ Virushka Dance ‘

ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ನವೆಂಬರ್ 24 ರಂದು ಮುಂಬೈ ಕೋರ್ಟಿನಲ್ಲಿ ವಿವಾಹವಾಗಿದ್ದರು.  ನಂತರ 27 ರಂದು ಮುಂಬೈನ ತಾಜ್ ಹೋಟೆಲಿನಲ್ಲಿ ಅದ್ದೂರಿ ರಿಸೆಪ್ಷನ್ ಏರ್ಪಡಿಸಿದ್ದರು. ಅಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆಯಾಗಿ ಕುಣಿದು ಸಂಭ್ರಮಿಸಿದ್ದಾರೆ.

ಇವರಿಬ್ಬರ ನಡುವಿನ ಲವ್ ರಿಲೇಷನ್ಷಿಪ್ ಈಗ ಗುಟ್ಟಾಗಿಯೇನು ಉಳಿದಿಲ್ಲ. ಅಭಿಮಾನಿಗಳು ವಿರಾಟ್ ಹಾಗೂ ಅನುಷ್ಕಾ ಜೋಡಿಯನ್ನು ಪ್ರೀತಿಯಿಂದ ‘ ವಿರುಷ್ಕಾ ‘ ಅಂತಲೇ ಕರೆಯುತ್ತಾರೆ. ಇವರಿಬ್ಬರೂ ಜಹೀರ್ ಮದುವೆ ರಿಸೆಪ್ಷನ್ ನಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Leave a Reply

Your email address will not be published.