WATCH : ಶಾರುಖ್ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ : ಕಿಂಗ್ ಖಾನ್ ಮಾಡಿದ್ದೇನು..?

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್, ನಟಿ ದೀಪಿಕಾ ಪಡುಕೋಣೆ ಅವರದ್ದು ಹಿಂದಿ ಸಿನೆಮಾ ರಂಗದ ಸೂಪರ್ ಹಿಟ್ ಜೋಡಿಗಳಲ್ಲೊಂದು. ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್, ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು.

ಆದರೆ ಶಾರುಖ್ ದೀಪಿಕಾ ಕಣ್ಣಲ್ಲಿ ನೀರು ಬರಲು ಕಾರಣರಾಗಿದ್ದಾರೆ. ನಂತರ ಕಣ್ಣೊರೆಸಿ ತಾವೇ ಸಮಾಧಾನ ಮಾಡಿದ್ದಾರೆ. ಶಾರುಖ್ ನಡೆಸಿಕೊಡುವ ‘ ಬಾತೇ ವಿತ್ ಬಾದಶಾಹ್ ‘ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ ಆಗಮಿಸಿದ್ದರು.

ದೀಪಿಕಾ ತಾಯಿ ಉಜ್ಜಲಾ ಪಡುಕೋಣೆ ಕೆಲವು ವರ್ಷಗಳ ಹಿಂದೆ ಮಗಳಿಗೆ ಬರೆದ ಪತ್ರವನ್ನು ಶಾರುಖ್ ತಮ್ಮ ಕಾರ್ಯಕ್ರಮದಲ್ಲಿ ಓದಿದ್ದಾರೆ. ಇದರಲ್ಲಿ ತಾಯಿ ಉಜ್ಜಲಾ, ‘ ನಿನ್ನಂತಹ ಮಗಳ ಪಡೆದ ಬಗ್ಗೆ ಹೆಮ್ಮೆಯಿದೆ ‘ ಎಂದು ದೀಪಿಕಾಗೆ ಬರೆದಿದ್ದರು. ಶಾರುಖ್ ಪತ್ರ ಓದಿದ ನಂತರ ಭಾವುಕರಾದ ದೀಪಿಕಾ ಪಡುಕೋಣೆ ಕಣ್ಣಂಚಿನಲ್ಲಿ ನೀರು ಬಂದಿದೆ. ಆಗ ಶಾರುಖ್ ಖಾನ್ ದೀಪಿಕಾ ಬಳಿ ತೆರಳಿ ಕಣ್ಣೀರು ಒರೆಸಿ ಸಮಾಧಾನ ಮಾಡಿದ್ದಾರೆ.

Leave a Reply

Your email address will not be published.