ಡಿಸ್ಚಾರ್ಜ್ ಮಾಡಲಿಲ್ಲ ವೈದ್ಯರು : ಅಮ್ಮನ ಆಸ್ಪತ್ರೆ ಬಿಲ್‌ ಕಟ್ಟಲು 7ರ ಬಾಲಕ ಮಾಡಿದ್ದೇನು……?

ಪಾಟ್ನಾ : ಆಸ್ಪತ್ರೆಯ ಬಿಲ್‌ ಕಟ್ಟುವವರೆಗೂ ರೋಗಿಯನ್ನು ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಮಹಿಳೆಯೊಬ್ಬರನ್ನು ಆಸ್ಪತ್ರೆ ಸಿಬ್ಬಂದಿ ಬಂಧನದಲ್ಲಿರಿಸಿಕೊಂಡಿದ್ದ ಕಾರಣ 7 ವರ್ಷದ ಮಗ ಭಿಕ್ಷೆ ಬೇಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಆಸ್ಪತ್ರೆಯೊಂದರಲ್ಲಿ 31 ವರ್ಷದ ಲಲಿತಾ ದೇವಿ ಎಂಬುವವರಿಗೆ ಹೆರಿಗೆಯಾಗಿ, ಮಗು ಸಾವಿಗೀಡಾಗಿತ್ತು. ಆಸ್ಪತ್ರೆಯವರು 70 ಸಾವಿರ ಬಿಲ್‌ ಮಾಡಿದ್ದರು. ಆದರೆ ಮಹಿಳೆಯ ಬಳಿ ಅಷ್ಟು ಹಣವಿರಲಿಲ್ಲ. ಹಣ ಕಟ್ಟದೆ ಡಿಸ್ಚಾರ್ಜ್‌ ಮಾಡುವುದಿಲ್ಲ ಎಂದಾಗ ಲಲಿತಾ ದೇವಿಯವರ 7 ವರ್ಷದ ಮಗ ರಸ್ತೆಯಲ್ಲಿ ಭಿಕ್ಷೆ ಬೇಡಿದ್ದಾನೆ.

ಈ ವೇಳೆ ಮಾದೇಪುರದ ಸಂಸದ ಪಪ್ಪು ಯಾದವ್‌ ಮಧ್ಯ ಪ್ರವೇಶಿಸಿ ಲಲಿತಾ ದೇವಿಯವರನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಆಸ್ಪತ್ರೆಯವರೇ ಲಲಿತಾ ದೇವಿಯವರಿಗೆ 10 ಸಾವಿರ ರೂ ನೀಡುವಂತೆ ಮಾಡಿದ್ದು, ಈಗ ಆಸ್ಪತ್ರೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆಸ್ಪತ್ರೆ ಮಾಲೀಕರುಾದ ನಿಶಾ ಭಾರ್ತಿ ತಾನೂ ವೈದ್ಯೆ ಎಂದು ಹೇಳಿಕೊಂಡಿದ್ದರು. ಆದರೆ ಅವರು ಪದವಿ ಮುಗಿಸಿದ್ದು, ಆಸ್ಪತ್ರೆಯ ರಿಜಿಸ್ಟ್ರೇಶನ್ ಸಹ ಮಾಡಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published.