ಸಂಯುಕ್ತಾ ಹೆಗಡೆ ವಿಚಾರದಲ್ಲಿ ಕಿರಿಕ್ ಮಾಡಿದ ಕಾಲೇಜು ಕುಮಾರ ನಿರ್ಮಾಪಕ…ಮತ್ತೇನಾಯ್ತು..?

ಕಿರಿಕ್‌ ಪಾರ್ಟಿಯ ಬೆಡಗಿ ಸಂಯುಕ್ತಾ ಹೆಗಡೆ ಮತ್ತೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಕಾಲೇಜು ಕುಮಾರ್‌ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಈಗ ಸಿನಿಮಾ ನಿರ್ಮಾಪಕ ಪದ್ಮನಾಭ್ ಸಂಯುಕ್ತಾ ಪ್ರಚಾರಕ್ಕೆ ಬರಲಿಲ್ಲ ಎಂದು ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದ್ಮನಾಭ್, ಸಂಯುಕ್ತಾ ಪ್ರಚಾರಕ್ಕೆ ಬರಲಿಲ್ಲ. ಇಂತಹ ನಾಯಕಿಯರನ್ನು ಬೆಳೆಸಬೇಡಿ ಎಂದಿದ್ದಾರೆ. ಅಲ್ಲದೆ ಸಂಯುಕ್ತಾ ವಿರುದ್ಧ ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ಹೇಳಿದ್ದಾರೆ.

ಇದಕ್ಕೆ ಸಂಯುಕ್ತಾ ಪ್ರತಿಕ್ರಿಯೆ ನೀಡಿದ್ದು, ಅನಾರೋಗ್ಯದ ಕಾರಣದಿಂದ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅದನ್ನು ಅವರ ಬಳಿಯೂ ಹೇಳಿದ್ದೆ. ಅಂದೇ ಮಾತನಾಡುವ ಬದಲು ಇಂದೇಕೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಜನ ಯಾರನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಇದರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದಿದ್ದಾರೆ.

ಕಾಲೇಜು ಕುಮಾರ ಸಿನಿಮಾ ವೇಳೆ ಸಂಯುಕ್ತಾ ಡೇಟ್ಸ್‌ ನೀಡಲಿಲ್ಲ ಎಂದು ಆರೋಪಿಸಿದ್ದರು. ಆದರೆ ಡೇಟ್ಸ್‌ ಹೊಂದಾಣಿಕೆಯಾಗದ ಕಾರಣ ತಮಿಳು ಸಿನಿಮಾ ಬಿಟ್ಟು ಕಲೇಜು ಕುಮಾರ ಸಿನಿಮಾ ಶೂಟಿಂಗ್‌ಗೆ ಸಂಯುಕ್ತಾ ಹಾಜರಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com