Ranaji Cricket : ಗೌತಮ್ ದಾಳಿಗೆ ಹಳಿ ತಪ್ಪಿದ ರೇಲ್ವೇಸ್ : ಕರ್ನಾಟಕಕ್ಕೆ 209 ರನ್ ಜಯ

ದೆಹಲಿಯ ಕರ್ನೈಲ್ ಸಿಂಗ್ ಮೈದಾನದಲ್ಲಿ ನಡೆದ ‘ಎ’ ಗುಂಪಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ, ರೇಲ್ವೇಸ್ ವಿರುದ್ಧ 209 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ನಾಲ್ಕನೇ ದಿನವಾದ ಮಂಗಳವಾರ ಗೆಲ್ಲಲು 377 ರನ್ ಟಾರ್ಗೆಟ್ ಪಡೆದ ರೇಲ್ವೇಸ್, 167 ಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಕರ್ನಾಟಕದ ಪರವಾಗಿ ಮಾರಕ ದಾಳಿ ನಡೆಸಿದ ಬೌಲರ್ ಕೃಷ್ಣಪ್ಪ ಗೌತಮ್ 7 ವಿಕೆಟ್ ಕಬಳಿಸಿ ರೇಲ್ವೇಸ್ ತಂಡದ ಸೋಲಿಗೆ ಕಾರಣರಾದರು.

ಇದಕ್ಕೂ ಮುನ್ನ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು ರೇಲ್ವೇಸ್ ತಂಡಕ್ಕೆ ಗೆಲ್ಲಲು 377 ರನ್ ಗುರಿ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಮಯಂಕ್ ಅಗರ್ವಾಲ್, ದ್ವಿತೀಯ ಇನ್ನಿಂಗ್ಸ್ ನಲ್ಲಿಯೂ ಸಹ ಸೆಂಚುರಿ ಸಿಡಿಸಿ 134 ರನ್ ಗಳಿಸಿದರು. ಮಯಂಕ್ ತಮ್ಮ ಇನ್ನಿಂಗ್ಸ್ ನಲ್ಲಿ ಒಟ್ಟು 13 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.

ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಮಯಂಕ್ ಅಗರ್ವಾಲ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಕರ್ನಾಟಕ ಹಾಗೂ ದೆಹಲಿ ತಂಡಗಳು ‘ಎ’ ಗುಂಪಿನಿಂದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com