ಟ್ರಂಪ್‌ ಮಗಳು ಇವಾಂಕಾಗೆ ಚಾರ್‌ಮಿನಾರ್‌ ನಾಗರಿಕರು ಕೊಟ್ಟ ಉಡುಗೊರೆ ಏನು….?

ಹೈದರಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಪುತ್ರಿ ಇವಾಂಕಾ ಟ್ರಂಪ್‌ ಹೈದರಾಬಾದ್‌ಗೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ವಿಶ್ವದ ಮೊದಲ ಪ್ರಜೆಯ ಮಗಳಿಗೆ ಉಡುಗೊರೆಯಾಗಿ ನೀಡಲು ವಿಶೇಷವಾದ ಬಳೆಗಳನ್ನು ತಯಾರಿಸಲಾಗಿದೆ.

ಹೈದರಾಬಾದ್‌ನ ಚೂಡಿ ಬಜಾರ್‌ನ ಖಾಜಾ ಮಹಮ್ಮದ್‌ ಅನ್ವರ್‌ ಸ್ಟೋರ್‌ನಲ್ಲಿ ಈ ಬಳೆಗಳನ್ನಿಡಲಾಗಿದ್ದು, ಭಾರತ ಹಾಗೂ ಅಮೆರಿಕದ ಧ್ವಜಗಳು, ಎರಡೂ ರಾಷ್ಟ್ರಗಳ ನಡುವಿನ ಸ್ನೇಹದ ಚಿತ್ರಗಳು ಹಾಗೂ ಇವಾಂಕಾ ಅವರ ಹೆಸರಿರುವ ಬಳೆಗಳನ್ನು ತಯಾರಿಸಿದ್ದಾರೆ.

ಈ ಕುರಿತು ಮಹಮ್ಮದ್‌ ಹೇಳಿಕೆ ನೀಡಿದ್ದು, ಹೈದರಾಬಾದ್‌ಗೆ ಪ್ರಧಾನಿ ಮೋದಿ ಜೊತೆ ಇವಾಂಕಾ ಬರುತ್ತಾರೆ ಎಂದು ತಿಳಿಯಿತು. ಆದ್ದರಿಂದ ಇವಾಂಕಾ ಅವರಿಗೆ ಬಳೆಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿ, ಈ ವಿಶೇಷ ಬಳೆಗಳನ್ನು ತಯಾರಿಸಿದ್ದೇವೆ. ಈ ಬಳೆಗಳನ್ನು ತಯಾರಿಸಲು 45 ದಿನ ತಗುಲಿದೆ. ಇದನ್ನು ಅವರಿಗೆ ತಲುಪಿಸುವ ಭರವಸೆ ಇದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com