ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಪದ್ಮಾವತಿ ಚಿತ್ರಕ್ಕೆ comment ಮಾಡಬೇಡಿ : ಸುಪ್ರೀಂಕೋರ್ಟ್‌

ದೆಹಲಿ : ವಿದೇಶಗಳಲ್ಲಿ ಪದ್ಮಾವತಿ ಚಿತ್ರ ಬಿಡುಗಡೆ ಮಾಡಲು ಆಸ್ಪದ ನೀಡದಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದು, ಈ ವಿಚಾರದಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿರುವ ವ್ಯಕ್ತಿಗಳು ತಲೆಹಾಕದಂತೆ ಸೂಚಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ಮನೋಹರ್‌ ಲಾಲ್ ಶರ್ಮಾ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದು, ಪದ್ಮಾವತಿ ಸಿನಿಮಾದಲ್ಲಿರುವ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮನವಿ ಮಾಡಿದ್ದರು. ಅಲ್ಲದೆ ಸಿನಿಮಾ ನಿರ್ದೇಶಕರಾದ ಸಂಜಯ್‌ ಲೀಲಾ ಬನ್ಸಾಲಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ಮುಖ್ಯ ಹುದ್ದೆಯಲ್ಲಿರುವವರು ಸಿನಿಮಾ ಕುರಿತು ಅನವಶ್ಯಕವಾಗಿ ಮಾತನಾಡದಂತೆ ಅಥವಾ ಈ ವಿಚಾರದಲ್ಲಿ ತಲೆ ಹಾಕದಂತೆ ಸೂಚಿಸಿದೆ.

ಈ ಹಿಂದೆ ನವೆಂಬರ್ 10ರಂದು ಪದ್ಮಾವತಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡದಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿನಿಮಾಗೆ ಸಿಬಿಎಫ್‌ಸಿ ಇನ್ನೂ ಸಿನಿಮಾಗೆ ಸರ್ಟಿಫಿಕೇಟ್‌ ನೀಡಿಲ್ಲ. ಈಗಲೇ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡಬೇಡಿ ಎಂಬುದರಲ್ಲಿ ಅರ್ಥವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತ್ತು.

 

 

Leave a Reply

Your email address will not be published.

Social Media Auto Publish Powered By : XYZScripts.com