Love jihad : ಒಬ್ಬ ಉಗ್ರನನ್ನು ನನ್ನ ಕುಟುಂಬಕ್ಕೆ ಸೇರಿಸಿಕೊಳ್ಳುವುದಿಲ್ಲ : ಹಾದಿಯಾ ತಂದೆ

ದೆಹಲಿ : ಕೇರಳದ ಲವ್‌ ಜಿಹಾದ್ ಪ್ರಕರಣ ಸಂಬಂಧ ಯುವತಿ ಹಾದಿಯಾ ಶಿಕ್ಷಣ ಮುಗಿಸುವಂತೆ ಸುಪ್ರೀಂಕೋರ್ಟ್‌ ಸೋಮವಾರ ಆದೇಶಿಸಿದ್ದು, ಇದನ್ನು ಹಾದಿಯಾ ತಂದೆ ಒಪ್ಪಿಗೆ ನೀಡಿದ್ದಾರೆ. ಆದರೆ ಒಬ್ಬ ಉಗ್ರನನ್ನು ನನ್ನ ಕುಟುಂಬಕ್ಕೆ ಸೇರಿಸಿಕೊಳ್ಳಲು ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ಮಗಳು ಹಾದಿಯಾ ಅಂತರ್‌ ಧರ್ಮೀಯ ವಿವಾದ ಸಂಬಂಧ ಹಾದಿಯಾ ತಂದೆ ಅಶೋಕನ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ನನಗೆ ಒಬ್ಬ ದೇವರು ಹಾಗೂ ಒಂದು ಧರ್ಮದ ಮೇಲೆ ನಂಬಿಕೆ ಇದೆ. ಆದರೆ ನನ್ನ ಕುಟುಂಬದಲ್ಲಿ ಉಗ್ರನನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದಿದ್ದು, ಹಾದಿಯಾ ಮತಾಂತರಗೊಂಡ ಮೇಲೆ ಸಿರಿಯಾಗೆ ತೆರಳುವ ಬಗ್ಗೆ ಅವಳಿಗೆ ಅರಿವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾದಿಯಾ ಶಿಕ್ಷಣಕ್ಕೆ ಇದು ಅಡ್ಡಿಯಾಗಿದೆ. ಇದಕ್ಕಾಗಿ ನನಗೆ ಬೇಸರವಿದೆ. ಆದರೆ ಈಗ ಆಕೆಯ ಶಿಕ್ಷಣ ಪೂರೈಸಲು ಕೋರ್ಟ್‌ ಅನುಮತಿ ನೀಡಿರುವುದು ಸಮಾಧಾನದ ವಿಷಯ ಎಂದಿದ್ದಾರೆ.
ಸೋಮವಾರವಷ್ಟೇ ಲವ್‌ ಜಿಹಾದ್ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಹಾದಿಯಾ ಶಿಕ್ಷಣ ಮುಂದುವರಿಸಬೇಕು. ಆದ್ದರಿಂದ ಆಕೆಯನ್ನು ಸೇಲಂನ ಶಿವರಾಜ್ ಹೋಮಿಯೋಪತಿ ಕಾಲೇಜಿಗೆ ಸೇರಿಸಿ. ಅದೇ ಕಾಲೇಜು ಯುವತಿಗೆ ಹಾಸ್ಟೆಲ್‌ ಸೌಲಭ್ಯ ಒದಗಿಸಬೇಕು. ಅಲ್ಲದೆ ಆಕೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಲೇಜಿನ ಡೀನ್‌ ವಹಿಸಿಕೊಳ್ಳಬೇಕು ಎಂದು ಆದೇಶಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com