ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಆರಂಭವಾಗಿದೆ : ಯಡಿಯೂರಪ್ಪ

ಪರಿವರ್ತನಾಯಾತ್ರೆಯ 18ನೆಯ ದಿನದ ಅಂತಿಮ ಘಟ್ಟದಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೃಹತ್ ಬಹಿರಂಗ ಸಮಾವೇಶವನ್ನು ನಡೆಸಿದರು.

ಸೂರ್ಯಾಸ್ತವನ್ನೂ ಗಣನೆಗೆ ತೆಗೆದುಕೊಳ್ಳದೆ ಸಾಗರೋಪಾದಿಯಲ್ಲಿ ಅಲ್ಲಿನ ಮಹಾಜನತೆ ಬಿಜೆಪಿಗೆ ಬೆಂಬಲ ಸೂಚಿಸಿದರು. ಜನನಾಯಕನ ಭಾಷಣವನ್ನು ಆಲಿಸಲು ಕಾತರರಾಗಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸನ್ಮಾನ್ಯ ಯಡಿಯೂರಪ್ಪನವರು  ‘ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಆರಂಭವಾಗಿದೆ.  ಈ ಭಾಗದ ನೇಕಾರರಿಂದಲೇ ಶಾಲಾ ಮಕ್ಕಳಿಗೆ ಸಮವಸ್ತ್ರ ತಯಾರಿಸಬಹುದಿತ್ತು. ಆದರೆ ಭ್ರಷ್ಟ ಕಾಂಗ್ರೆಸ್ಸಿಗೆ ಇದ್ಯಾವುದರಲ್ಲೂ ಆಸಕ್ತಿ ಇಲ್ಲ. ಕೇವಲ 3 ವರ್ಷಗಳಲ್ಲಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತಿದ್ದಾರೆ ‘ ಎಂದು ಹೇಳಿದರು.

ಮುಖಂಡರುಗಳಾದ ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಗೋವಿಂದ್ ಕಾರಜೋಳ, ಲಕ್ಷ್ಮಣ ಸವದಿ, ಅರವಿಂದ್ ಲಿಂಬಾವಳಿ, ಎನ್ ರವಿಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com